ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರ್ಜೈ ಕೀಲುಗೊಂಬೆ ಅಧ್ಯಕ್ಷ: ತಾಲಿಬಾನ್ ಗೇಲಿ (Karzai | Taliban | kabul | Afgan)
Feedback Print Bookmark and Share
 
ಆಫ್ಘಾನಿಸ್ತಾನದ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆಗೆ ಏರಿದ ಹಮೀದ್ ಕರ್ಜೈ ಕೀಲುಗೊಂಬೆ ಅಧ್ಯಕ್ಷ ಎಂದು ತಾಲಿಬಾನ್ ಮಂಗಳವಾರ ವ್ಯಂಗ್ಯವಾಡಿದೆ. ಆಫ್ಘಾನಿಸ್ತಾನದಲ್ಲಿ ಎದುರಾಳಿ ಪಕ್ಷದ ಅಬ್ದುಲ್ಲಾ ಅಬ್ದುಲ್ಲಾ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಎರಡನೇ ಸುತ್ತಿನ ಚುನಾವಣೆಯನ್ನು ರದ್ದುಪಡಿಸಿದ ಆಫ್ಘಾನಿಸ್ತಾನ ಕರ್ಜೈಯನ್ನು ವಿಜಯಿಯೆಂದು ಘೋಷಿಸಿದೆ.

ಹಮೀದ್ ಕರ್ಜೈ ಚುನಾವಣೆ ಅಕ್ರಮದಲ್ಲಿ ತೊಡಗಿದ್ದಾರೆಂದು ವಾಷಿಂಗ್ಟನ್ ಮತ್ತು ಲಂಡನ್ ಎರಡು ವಾರಗಳ ಹಿಂದೆ ಘೋಷಿಸಿದ್ದವು. ಆದರೆ ಈಗ ಅವೇ ಮತಗಳ ಆಧಾರದ ಮೇಲೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಶುಭಾಶಯ ತಿಳಿಸಿರುವುದಿಂದ ನಗೆಪಾಟಲಿಗೆ ಗುರಿಯಾಗಿದೆಯೆಂದು ತಾಲಿಬಾನ್ ಆರೋಪಿಸಿದೆ. ಏತನ್ಮಧ್ಯೆ ಸುದ್ದಿಗೋಷ್ಠಿ ನಡೆಸಿದ ಕರ್ಜೈ, ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿ ರಾಷ್ಟ್ರದ ಮುಖ್ಯವಾಹಿನಿಗೆ ಸೇರುವಂತೆ ಉಗ್ರರಿಗೆ ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ