ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನಿನ ರಾಜಧಾನಿ ಬದಲಿಗೆ ಗಂಭೀರ ಚಿಂತನೆ (Khameni | Earthquake | Tehran | Iran)
Feedback Print Bookmark and Share
 
ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಮುಂದಿನ ಭವಿಷ್ಯದಲ್ಲಿ ಭಾರೀ ಭೂಕಂಪ ಸಂಭವಿಸಬಹುದೆಂದು ಭೂಕಂಪತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ತನ್ನ ರಾಜಧಾನಿಯನ್ನು ಸ್ಥಳಾಂತರಿಸಲು ಇರಾನ್ ಪರಿಶೀಲನೆ ನಡೆಸುತ್ತಿದೆ. ರಾಜಧಾನಿಯನ್ನು ಬದಲಿಸುವ ಕಲ್ಪನೆಯನ್ನು ಅಯತೊಲ್ಲಾ ಅಲಿ ಖೊಮೇನಿ ಪ್ರಸ್ತಾಪಿಸಿದ್ದಾರೆ.

ಟೆಹ್ರಾನ್‌ನಲ್ಲಿ ಭೂಮಿಯ ಹೊರಪದರದಲ್ಲಿ ಸುಮಾರು 100 ಕಡೆ ದೋಷಗಳಿರುವ ಹಿನ್ನೆಲೆಯಲ್ಲಿ ಪ್ರಮುಖ ಭೂಕಂಪ ಸಂಭವಿಸಿದರೆ ಉಳಿಯುವ ಸಂಭವವಿಲ್ಲವೆಂದು ಭೂಕಂಪ ತಜ್ಞರ ಎಚ್ಚರಿಕೆಗೆ ಖೊಮೇನಿ ಪ್ರತಿಕ್ರಿಯಿಸಿದ್ದಾರೆ.

2003ರಲ್ಲಿ ಬಾಮ್ ನಗರದಲ್ಲಿ ಸಂಭವಿಸಿದ ಭೂಕಂಪದಲ್ಲಿ 40,000 ಜನರು ಅಸುನೀಗಿದ ಬಳಿಕ ರಾಜಧಾನಿ ಬಜಲಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ