ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅತ್ಯಾಚಾರ, ಹತ್ಯೆ: ವಿಕೃತ ಕಾಮಿಗೆ ಜಾಮೀನು ನಕಾರ (Cleveland | Cleveland | Sowell | Adrine)
Feedback Print Bookmark and Share
 
ಕ್ಲೀವ್‌ಲ್ಯಾಂಡ್‌‍ನ ಮನೆಯೊಂದರಲ್ಲಿ 10 ಮೃತದೇಹಗಳು ಪತ್ತೆಯಾದ ಬಳಿಕ ವಿಕೃತಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಅವನಿಗೆ ಯಾವುದೇ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದ್ದಾರೆ. ಸುಮಾರು 5 ಪ್ರಕರಣಗಳಲ್ಲಿ ಭೀಕರ ಹತ್ಯೆಗಳನ್ನು ನಡೆಸಿದ ಆರೋಪವನ್ನು ನ್ಯಾಯಾಧೀಶರು ಅವನ ವಿರುದ್ಧ ಹೊರಿಸಿದ್ದಾರೆ.

ಕಳೆದ ವಾರ 50ರ ಪ್ರಾಯದ ಸೊವೆಲ್ ಮನೆಗೆ ದಾಳಿ ಮಾಡಿದ ಪೊಲೀಸರು ಮನೆಯಲ್ಲಿ 6 ಮಹಿಳೆಯರ ಶವಗಳು ಪತ್ತೆಯಾದ ಬಳಿಕ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಸೋವೆಲ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ವಿಕೃತ ಕಾಮಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಇನ್ನೂ ನಾಲ್ಕು ಮಹಿಳೆಯರ ಶವಗಳನ್ನು ಹುಗಿದಿದ್ದನ್ನು ಹೊರತೆಗೆಯಲಾಗಿದ್ದು, ಮನೆಯ ನೆಲಮಾಳಿಗೆಯಲ್ಲಿ ತಲೆಬುರುಡೆ ಕೂಡ ಪತ್ತೆಯಾಗಿದೆ. ನೆರೆಯಲ್ಲಿರುವ ಖಾಲಿ ಮನೆಗಳಲ್ಲಿ ಕೂಡ ಶೋಧ ನಡೆಸಲು ಪೊಲೀಸರು ನಿರ್ಧರಿಸಿದ್ದು, ಇನ್ನಷ್ಟು ಮಹಿಳೆಯರನ್ನು ಪೋವೆಲ್ ಹತ್ಯೆಮಾಡಿರಬಹುದೆಂದು ಶಂಕಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ