ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಧ್ಯಕ್ಷರ ಅಧಿಕಾರ ಮೊಟಕಿಗೆ ಗಿಲಾನಿ ಹೆಜ್ಜೆ (Islamabad | Gilani | Zardari | Pakistan)
Feedback Print Bookmark and Share
 
ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಮತ್ತು ಪ್ರಧಾನಮಂತ್ರಿ ಗಿಲಾನಿ ನಡುವೆ ಭಿನ್ನಮತದ ಕಿಡಿ ಭುಗಿಲೆದ್ದಿರುವ ನಡುವೆ, ಪಾಕಿಸ್ತಾನ ಅಧ್ಯಕ್ಷರ ಅಧಿಕಾರಗಳನ್ನು ಮೊಟಕುಗೊಳಿಸಲು ಶಿಫಾರಸುಗಳನ್ನು ಮಾಡುವ ಸಮಿತಿಗೆ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತೆ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಸೂಚಿಸಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿಗೆ ಕ್ಷಮೆ ನೀಡುವ ವಿವಾದಾತ್ಮಕ ಕಾನೂನಿಗೆ ಅನುಮೋದನೆ ನೀಡಬೇಕೆಂದು ಸಂಸತ್ತಿಗೆ ಕೋರುವ ಯೋಜನೆಯನ್ನು ಕೈಬಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ಉಂಟಾಗಿದೆ. ಪ್ರಧಾನಮಂತ್ರಿಯನ್ನು ವಜಾ ಮಾಡುವ ಮತ್ತು ಸಂಸತ್ತನ್ನು ವಿಸರ್ಜಿಸುವ ಅಧ್ಯಕ್ಷರ ಅಧಿಕಾರಗಳನ್ನು ರದ್ದುಮಾಡುವುದೂ ಸೇರಿದಂತೆ ಪ್ರಮುಖ ಸಂಸದೀಯ ತಿದ್ದುಪಡಿಗಳಿಗೆ ಶಿಫಾರಸುಗಳನ್ನು ತ್ವರಿತಗತಿಯಲ್ಲಿ ನೀಡುವಂತೆ ಗಿಲಾನಿ ಸಂಸದೀಯ ಸಮಿತಿಗೆ ಸೂಚಿಸಿದ್ದಾರೆ.

ಈಗಿನ ಆಡಳಿತರೂಢ ಪಿಪಿಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ರದ್ದುಮಾಡುವಂತೆ ಮಾಜಿ ಮಿಲಿಟರಿ ಆಡಳಿತಗಾರ ಮುಷರಫ್ ರಾಷ್ಟ್ರೀಯ ಮರುಸಂಧಾನ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದರು. ಈ ಸುಗ್ರೀವಾಜ್ಞೆಗೆ ಪಿಎಂಎಲ್-ಎನ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಅದನ್ನು ಸಂಸತ್ತಿನಲ್ಲಿ ಅನುಮೋದಿಸುವ ನಿರ್ಧಾರವನ್ನು ಜರ್ದಾರಿ ಕೈಬಿಟ್ಟಿದ್ದಾರೆ.

ಜರ್ದಾರಿ ಮತ್ತು ಗಿಲಾನಿ ನಡುವೆ ಭಿನ್ನಮತಗಳು ಹೆಚ್ಚುತ್ತಿರುವ ವರದಿಗಳ ನಡುವೆ, ಪಿಪಿಪಿ ಮತ್ತು ಪಿಎಂಎಲ್-ಎನ್ ಅಂಕಿತ ಹಾಕಿದ ಪ್ರಜಾಪ್ರಭುತ್ವ ಸನ್ನದಿನ ಅನುಷ್ಠಾನಕ್ಕೆ ತಮ್ಮ ಪಕ್ಷವು ಬದ್ಧವಾಗಿದೆಯೆಂದು ರಾಷ್ಟ್ರೀಯ ಅಸೆಂಬ್ಲಿಗೆ ಗಿಲಾನಿ ಸೂಚಿಸಿದ್ದಾರೆ. ಮುಷರಫ್ ಅವರು ಸಂಸತ್ತನ್ನು ವಿಸರ್ಜಿಸುವ ಮತ್ತು ಸೇನಾ ಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡುವ ಅಧಿಕಾರಗಳು ಸೇರಿದಂತೆ ಪ್ರಧಾನಮಂತ್ರಿಗಳ ಅಧಿಕಾರಗಳನ್ನು ಹೊಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ