ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪುತ್ರಿ ಮೈ ಬೆಚ್ಚಗಿರಿಸಲು ಡಾಲರ್ ಸುಟ್ಟ ಕೊಕೇನ್ ದೊರೆ (Columbia | Druglord | Escobar | Cocaine)
Feedback Print Bookmark and Share
 
ಕೊಲಂಬಿಯದ ಕೊಕೇನ್ ದೊರೆ ಕೇವಲ ಒಂದೇ ರಾತ್ರಿಯಲ್ಲಿ 1.5 ದಶಲಕ್ಷ ಡಾಲರ್ ನೋಟಿನ ಕಂತೆಗಳನ್ನು ಸುಟ್ಟುಹಾಕಿದ ಆಶ್ಚರ್ಯಕರ ಸಂಗತಿ ನಡೆದಿದೆ. ಕೊಕೇನ್ ದೊರೆಯು ತನ್ನ ಪರ್ವತಚ್ಛಾದಿತ ಅಡಗುತಾಣದಲ್ಲಿ ತನ್ನ ಪುತ್ರಿಯನ್ನು ಚಳಿಯಿಂದ ಬೆಚ್ಚಗಿರಿಸುವುದಕ್ಕಾಗಿ ಡಾಲರ್‌ನ ಕಂತೆ, ಕಂತೆ ನೋಟುಗಳಿಗೆ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಂಡರೆಂದು ವರದಿಯಾಗಿದೆ.

ಮಾದಕವಸ್ತು ದೊರೆಗಳಿಗೆ ಹಣವೆನ್ನುವುದು ಕೇವಲ ಮೋಜಿನ ವಸ್ತುವೆನ್ನುವುದಕ್ಕೆ ಇದು ಸಾಕ್ಷ್ಯ ಒದಗಿಸಿದೆ. ಮಾದಕವಸ್ತು ದೊರೆ ಪಾಬ್ಲೊ ಎಸ್ಕೊಬಾರ್ ಅಮೆರಿಕ ಡಾಲರುಗಳ ಕಂತೆಗಳನ್ನು ಅಡಗುತಾಣದಲ್ಲಿ ಹರಡಿ ಅದಕ್ಕೆ ಬೆಂಕಿ ಹಚ್ಚಿದ. ತನ್ನ ಪುತ್ರಿ ಹೈಪೊಥರ್ಮಿಯದಿಂದ ನರಳುತ್ತಿದ್ದಾಳೆಂದು ಭಾವಿಸಿದ ಎಸ್ಕೊಬಾರ್ ಹಣವನ್ನು ಸುಟ್ಟು, ಪುತ್ರಿಯನ್ನು ಬೆಚ್ಚಗಿರಿಸಿದನೆಂದು ಎಸ್ಕೊಬಾರ್ ಪುತ್ರ ಸೆಬಾಸ್ಟಿಯನ್ ಮಾರೋಕ್ವಿನ್ ತಿಳಿಸಿದ್ದಾನೆ.

ಮೆಡೆಲಿನ್ ಕೂಟದ ಮುಖ್ಯಸ್ಥನಾಗಿದ್ದ ಎಸ್ಕೊಬಾರ್ 1989ರಲ್ಲಿ 18 ಶತಕೋಟಿ ಡಾಲರ್ ಆಸ್ತಿಪಾಸ್ತಿಯ ಒಡೆಯನಾಗಿದ್ದು, ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ ಜಗತ್ತಿನ 7ನೇ ಶ್ರೀಮಂತ ವ್ಯಕ್ತಿಯೆಂದು ಪಟ್ಟ ನೀಡಿತ್ತು. ತನ್ನ ಅಧಿಕಾರದ ತುತ್ತತುದಿಯಲ್ಲಿ ಎಸ್ಕೊಬಾರ್ ಮಾದಕವಸ್ತು ಸಾಮಾಜ್ರ್ಯದ ಬಹುಭಾಗ ನಿಯಂತ್ರಣದಲ್ಲಿರಿಸಿದ್ದು, ಮ್ಯಾನ್ಶನ್‌ಗಳು, ವಿಮಾನಗಳು, ಖಾಸಗಿ ಮೃಗಾಲಯ ಮತ್ತು ಸೈನಿಕರ ಸ್ವಂತ ಸೇನೆ ಮತ್ತು ಕಟ್ಟಾ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಎಸ್ಕೊಬಾರ್ ಕೋಟ್ಯಂತರ ಡಾಲರ್ ಹಣ ಸಂಪಾದಿಸಿದ.

ನೂರಾರು, ಸಾವಿರಾರು ಜನರ ಹತ್ಯೆಗೆ ಆದೇಶ ನೀಡಿದ. ಅದೇ ಸಂದರ್ಭದಲ್ಲಿ ಶಾಲೆಗಳು, ಸ್ಟೇಡಿಯಂ, ಚರ್ಚ್‌ಗಳು ಮತ್ತು ಬಡವರ ವಸತಿಗೆ ಲಕ್ಷಾಂತರ ಡಾಲರ್ ಖರ್ಚು ಮಾಡಿದನೆಂದು ವರದಿಯಾಗಿದೆ.

1993ರಲ್ಲಿ ಕೊಲಂಬಿಯದ ಭದ್ರತಾ ಪಡೆಗಳು ಅಮೆರಿಕದ ತಂತ್ರಜ್ಞಾನದ ನೆರವಿನಿಂದ ಎಸ್ಕೊಬಾರ್ ಅಡಗುತಾಣ ಪತ್ತೆಹಚ್ಚಿ ತಪ್ಪಿಸಿಕೊಳ್ಳುತ್ತಿದ್ದ ಎಸ್ಕೊಬಾರ್‌ನನ್ನು ಗುಂಡಿಟ್ಟು ಹತ್ಯೆಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ