ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿರೂಪಕಿಯರಿಗೆ ಅಡಿಯಿಂದ ಮುಡಿವರೆಗೆ ಹಿಜಾಬ್ (Saudi Arabia | Hijab | Women | Sawsan)
Feedback Print Bookmark and Share
 
ಸೌದಿ ಅರೇಬಿಯದ ಟೆಲಿವಿಷನ್ ಚಾನೆಲ್ ತನ್ನ ಕಾರ್ಯಕ್ರಮವೊಂದರಲ್ಲಿ ಮಹಿಳೆಯರಿಗೆ ನಿರೂಪಕಿಯರಾಗಲು ಅವಕಾಶ ನೀಡಿದ್ದರೂ, ಅವರು ತಲೆಯಿಂದ ಪಾದದವರೆಗೆ ಹಿಜಾಬ್ ಧರಿಸಬೇಕೆಂದು ಕಟ್ಟಾಜ್ಞೆ ಮಾಡಿದೆ.

ಧಾರ್ಮಿಕ ಚಾನೆಲ್ ಅವ್ತಾನ್ ಟಿವಿಯು ಅಪ್ರಾಪ್ತ ಬಾಲಕಿಯರು ಮತ್ತು ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಕಾರ್ಯಕ್ರಮ ನಿರ್ವಾಹಕರು ಅಡಿಯಿಂದ ಮುಡಿಯವರೆಗೆ ಕಪ್ಪು ಉಡುಪನ್ನೇ ಧರಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ಅಸ್ರಾರ್ ಅಲ್ ಬಾನಟ್ ಅಥವಾ ಬಾಲಕಿಯರ ರಹಸ್ಯಗಳು ಹೆಸರಿನ ಕಾರ್ಯಕ್ರಮಕ್ಕೆ ಮಾಧ್ಯಮ ಪದವೀಧರೆ ಸಾವ್ಸನ್ ಸಾಲಾ ಅಲ್ ಡೀನ್, ಆಕೆಯ ಸೋದರಿ, ರಕ್ತದ ಕಾಯಿಲೆಗಳಲ್ಲಿ ತಜ್ಞೆ ಸಾರಾ ಮತ್ತು ಮಾನಸಿಕತಜ್ಞೆ ನವಾಲ್ ದಾವೂದ್ ಕಾರ್ಯಕ್ರಮ ನಿರೂಪಕಿಯರು. ಸಾದ್ ಅಲ್ ಒಬೇದ್ ನಿರ್ದೇಶನದ ಕಾರ್ಯಕ್ರಮವು ಸಾರ್ವಜನಿಕರಿಂದ ನೇರ ದೂರವಾಣಿ ಕರೆ ಸ್ವೀಕರಿಸುತ್ತದೆ.

ತಾವು ಟಿವಿಯಲ್ಲಿ ಹೇಗೆ ಕಾಣಿಸುತ್ತಿದ್ದೇನೆಂದು ಪ್ರತಿಕ್ರಿಯಿಸಿದ ಸಾವ್ಸನ್, ಚಾನೆಲ್ ಇಸ್ಲಾಮಿಕ್ ಧರ್ಮದ್ದಾಗಿದ್ದು, ತಾವು ತಲೆಯಿಂದ ಕೆಳಗಿನವರೆಗೆ ಪೂರ್ಣ ಹಿಜಾಬ್‌ ಧರಿಸಬೇಕೆಂದು ನಿಯಮ ವಿಧಿಸಿದ್ದರೆಂದು ಹೇಳಿದ್ದಾರೆ.ಟೆಲಿವಿಷನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಾವ್ಸನ್, ತಾವು ಮೊದಲಿಗೆ ಕೊಂಚ ಕಸಿವಿಸಿಗೆ ಒಳಗಾಗಿದ್ದಾಗಿ ಹೇಳಿದ್ದಾಳೆ. ಕಾರ್ಯಕ್ರಮವು ಯುವತಿಯರಿಗೆ ಸಂಬಂಧಿಸಿದ್ದರಿಂದ ಅವರ ಕುಟುಂಬ ಸಮ್ಮತಿ ನೀಡಿತೆಂದು ಹೇಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ