ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರ್ಜೈ ಆಯ್ಕೆ ಕಾನೂನುಬದ್ಧವೆಂದ ಅಮೆರಿಕ (Afghan | Karzai | Ian Kelly | Abdullah)
Feedback Print Bookmark and Share
 
ಆಫ್ಘಾನ್ ಚುನಾವಣೆ ಕುರಿತಂತೆ ಚುನಾವಣೆ ಆಯೋಗದ ನಿರ್ಧಾರವು ಕಾನೂನುಬದ್ಧವಲ್ಲವೆಂಬ ಟೀಕೆಗಳು ಕೇಳಿಬರುತ್ತಿರುವ ನಡುವೆ, ಹಮೀದ್ ಕರ್ಜೈ ಕಾನೂನುಬದ್ಧವಾಗಿ ಆಯ್ಕೆಯಾದ ಅಧ್ಯಕ್ಷರೆಂದು ಅಮೆರಿಕ ಗುರುವಾರ ತಿಳಿಸಿದೆ.

ಆಫ್ಘಾನ್ ಕಾನೂನಿಗೆ ಅನುಗುಣವಾಗಿ ಚುನಾವಣೆಯನ್ನು ಕೈಗೊಳ್ಳಲಾಗಿದ್ದು, ನಾವು ಹಮೀದ್ ಕರ್ಜೈ ಅವರನ್ನು ಆಫ್ಘಾನಿಸ್ತಾನದ ಕಾನೂನುಬದ್ಧವಾಗಿ ಆಯ್ಕೆಯಾದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆಂದು ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ತಿಳಿಸಿದ್ದಾರೆ. ಪ್ರತಿಪಕ್ಷದ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಅವರು ಅಧ್ಯಕ್ಷರ ಎರಡನೇ ಹಂತದ ಚುನಾವಣೆಯಿಂದ ಹಿಂದೆಸರಿದ ಹಿನ್ನೆಲೆಯಲ್ಲಿ ಕರ್ಜೈ ಅವರನ್ನು ಅಧ್ಯಕ್ಷರೆಂದು ಚುನಾವಣೆ ಆಯೋಗ ಘೋಷಿಸಿದ ಕ್ರಮವನ್ನು ಅಬ್ದುಲ್ಲಾ ಅಬ್ದುಲ್ಲಾ ಟೀಕಿಸಿದ ಬಳಿಕ ಐಯಾನ್ ಕೆಲ್ಲಿ ಹೇಳಿಕೆ ಮಹತ್ವ ಪಡೆದಿದೆ.

ಚುನಾವಣೆಯಲ್ಲಿ ಆಫ್ಘಾನ್ ಕಾನೂನಿನಂತೆ ಪ್ರತಿಯೊಂದು ನಿಯಮಗಳನ್ನು ಪಾಲಿಸಲಾಯಿತು. ಹಮೀದ್ ಕರ್ಜೈ ಗಳಿಸಿದ ಮತಗಳಲ್ಲಿ ಅಕ್ರಮ ಮತಗಳೆಂದು ಶಂಕಿಸಿದ ಮತಗಳನ್ನು ತೆಗೆದಿದ್ದರಿಂದ ಅವರು ಚುನಾವಣೆ ಗೆಲುವಿಗೆ ಬೇಕಾದ ಶೇ.50 ಮತಗಳನ್ನು ಮುಟ್ಟಲಿಲ್ಲವಾದ್ದರಿಂದ ಎರಡನೇ ಹಂತದ ಚುನಾವಣೆ ನಿರ್ಧರಿಸಲಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬ ವ್ಯಕ್ತಿ ಹಿಂತೆಗೆದುಕೊಂಡಿದ್ದರಿಂದ ಚುನಾವಣೆ ನಡೆಸುವುದರಲ್ಲಿ ಅರ್ಥವಿಲ್ಲವೆಂದು ಪರಿಗಣಿಸಿದ ಆಯೋಗ ಕರ್ಜೈ ಅವರನ್ನು ಅಧ್ಯಕ್ಷರೆಂದು ಘೋಷಿಸಿದ್ದಾಗಿ ಐಯಾನ್ ಕೆಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ