ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೇನಾಮೇಜರ್ ಗುಂಡಿನ ದಾಳಿಗೆ 12 ಜನರು ಬಲಿ (Hasan | Rampage | Virginia | United States)
Feedback Print Bookmark and Share
 
ವಿದೇಶಕ್ಕೆ ವರ್ಗಾವಣೆಯಾಗಲಿದ್ದ ಅಮೆರಿಕ ಸೇನೆಯ ಮಾನಸಿಕತಜ್ಞ ಮೇಜರ್ ನಿಡಾಲ್ ಮಲಿಕ್ ಹಸನ್ ಫೋರ್ಟ್ ಹುಡ್ ಸೇನಾ ಚೌಕಿ ಮೇಲೆ ಗುರುವಾರ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ 12 ಜನರು ಸತ್ತಿದ್ದು, 31 ಜನರು ಗಾಯಗೊಂಡ ಭೀಕರ ಘಟನೆ ಸಂಭವಿಸಿದೆ. ಅಮೆರಿಕದ ಮಿಲಿಟರಿ ನೆಲೆಯಲ್ಲಿ ಸಂಭವಿಸಿದ ಭೀಕರ ಸಾಮೂಹಿಕ ಶೂಟಿಂಗ್ ಎಂದು ಈ ಘಟನೆಯನ್ನು ಬಣ್ಣಿಸಲಾಗಿದೆ.

ಆಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಅಮೆರಿಕ ತನ್ನ ಸೇನೆಯನ್ನು ಕಳಿಸಿದ್ದರಿಂದ ಹಸನ್ ತೀವ್ರ ಅತೃಪ್ತನಾಗಿದ್ದನೆಂದು ತಿಳಿದುಬಂದಿದೆ.ಅಮೆರಿಕ ಅಧ್ಯಕ್ಷ ಒಬಾಮಾ ಆಫ್ಘಾನಿಸ್ತಾನ ಮತ್ತು ಇರಾಕ್‌ನಿಂದ ಪಡೆಗಳನ್ನು ವಾಪಸು ಪಡೆಯುತ್ತಾರೆಂದು ಹಸನ್ ಆಶಿಸಿದ್ದ. ಮಿಲಿಟರಿಯಲ್ಲಿ ಯುದ್ಧಕ್ಕೆ ಬೆಂಬಲಿಸುವ ಯೋಧರ ಜತೆ ಅವನು ಆಗಾಗ್ಗೆ ವಾಗ್ವಾದಕ್ಕಿಳಿಯುತ್ತಿದ್ದನೆಂದು ವರದಿಯಾಗಿತ್ತು.

39 ವರ್ಷ ವಯಸ್ಸಿನ ವಿರ್ಜಿನಿಯದ ಬಂದೂಕುಧಾರಿಯನ್ನು ಮೊದಲಿಗೆ ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಹೇಳಲಾಗಿತ್ತು. ಆದರೆ ಅವರು ಜೀವಂತವಾಗಿದ್ದು ಅವನು ಸ್ಥಿರ ಪರಿಸ್ಥಿತಿಯಲ್ಲಿದ್ದಾನೆಂದು ಲೆ.ಜ.ಬಾಬ್ ಕೋನ್ ತಿಳಿಸಿದ್ದಾರೆ. ಬಂದೂಕುಧಾರಿ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದ್ದು, ಅವನ ಸ್ಥಿತಿ ಗಂಭೀರವಾಗಿದೆಯೆಂದು ಕರ್ನಲ್ ಬೆನ್ ಡ್ಯಾನರ್ ತಿಳಿಸಿದ್ದಾರೆ.

ಹತ್ಯೆಗೆ ಪ್ರೇರಣೆ ಏನೆಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ವಾಲ್ಟರ್ ರೀಟ್ ವೈದ್ಯಕೀಯ ಕೇಂದ್ರದಿಂದ ಕಳೆದ ಜುಲೈನಲ್ಲಿ ಫೋರ್ಟ್ ಹುಡ್‌ಗೆ ಹಸನ್‌ನನ್ನು ವರ್ಗ ಮಾಡಲಾಗಿತ್ತೆಂದು ಗುರುತು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೂಟರ್ ಹಸನ್ ಎರಡು ಪಿಸ್ತೂಲುಗಳನ್ನು ಬಳಸಿದ್ದು, ಅದರಲ್ಲೊಂದು ಅರೆಸ್ವಯಂಚಾಲಿತವೆಂದು ಡ್ಯಾನರ್ ತಿಳಿಸಿದ್ದಾರೆ.

ವಿಡಿಯೊ ದೃಶ್ಯಗಳಲ್ಲಿ ಆ ಪ್ರದೇಶದಲ್ಲಿ ಹ್ಯಾಂಡ್‌ಗನ್ ಮತ್ತು ಬಂದೂಕುಗಳನ್ನು ಹಿಡಿದು ಗಸ್ತುತಿರುಗುತ್ತಿದ್ದ ಪೊಲೀಸರು ಕಟ್ಟಡಗಳ ಹಿಂದೆ ಅಡಗಿಕೊಂಡಿದ್ದು ಕಂಡುಬಂದಿದೆ. ಸೈರನ್‌ಗಳು ಕೂಗುವ ಶಬ್ದ ಮತ್ತು ಜನರಿಗೆ ಅಡಗಿಕೊಳ್ಳುವಂತೆ ಕೂಗುತ್ತಿದ್ದ ಮಹಿಳೆಯೊಬ್ಬರ ಧ್ವನಿ ಕೇಳಿಬಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಸನ್, ಅಮೆರಿಕ, ಇರಾಕ್, ಒಬಾಮಾ