ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಿಲಿಟರಿ ನೆಲೆ ಮೇಲೆ ದಾಳಿ ಹಿಂಸೆಯ ಸ್ಫೋಟ: ಒಬಾಮಾ (Obama | Texas | military base | Horrific)
Feedback Print Bookmark and Share
 
ಟೆಕ್ಸಾಸ್ ಫೋರ್ಟ್ ಹುಡ್ ಮಿಲಿಟರಿ ನೆಲೆಯಲ್ಲಿ ಗುರುವಾರ ನಡೆದ ಶೂಟಿಂಗ್ ದಾಳಿ ಭಯಾನಕ ಹಿಂಸಾಚಾರದ ಆಸ್ಫೋಟವೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ. ಅನೇಕ ಮಂದಿ ಅಮೆರಿಕ ಯೋಧರು ಸತ್ತಿದ್ದಾರೆಂದು ತಮಗೆ ಮಾಹಿತಿ ಸಿಕ್ಕಿದೆ. ಅದಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದು ಹಿಂಸೆಯ ಭಯಾನಕ ಸ್ಫೋಟವೆಂದು ಬಣ್ಣಿಸಿದ್ದಾರೆ.

ಮಿಲಿಟರಿ ನೆಲೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 12 ಮಂದಿ ಸತ್ತಿದ್ದು, 31 ಮಂದಿ ಗಾಯಗೊಂಡಿದ್ದಾರೆಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಮೃತರ ಬಂದುಗಳಿಗೆ ತಮ್ಮ ತಮ್ಮ ಸಂತಾಪವನ್ನು ತಿಳಿಸಿದ ಒಬಾಮಾ, ದಿಟ್ಟ ಅಮೆರಿಕನ್ನರನ್ನು ನಾವು ಸಾಗರೋತ್ತರ ಸಮರಗಳಲ್ಲಿ ಕಳೆದುಕೊಂಡಾಗ ಆ ದುಃಖ ಭರಿಸುವುದು ಕಷ್ಟ.

ಆದರೆ ಅಮೆರಿಕದ ನೆಲದಲ್ಲಿ ಸೇನಾ ನೆಲೆಮೇಲೆ ಗುಂಡಿನ ದಾಳಿ ಭಯಾನಕವಾಗಿದೆಯೆಂದು ಅವರು ಉದ್ಗರಿಸಿದ್ದಾರೆ. ದಾಳಿಯ ಹಿಂದೆ ಯಾರಿದ್ದಾರೆ ಮತ್ತು ಅದಕ್ಕೆ ಪ್ರೇರಣೆಯೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಭಯಾನಕ ಘಟನೆಯ ಬಗ್ಗೆ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕಂಡುಕೊಳ್ಳುತ್ತೇವೆ ಎಂದು ಒಬಾಮಾ ಪಣ ತೊಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ