ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಜಿ ಪಿಎಂಗೆ ಎಸೆದ ಬೂಟನ್ನು ಕ್ಯಾಚ್ ಹಿಡಿದ ವಿದ್ಯಾರ್ಥಿ (Cambridge | Howard | Chapman | Shoe)
Feedback Print Bookmark and Share
 
ಕೇಂಬ್ರಿಜ್ ವಿಶ್ವವಿದ್ಯಾಲಯದ ಚರ್ಚಾಕೂಟವೊಂದರಲ್ಲಿ ಆಸ್ಟ್ರೇಲಿಯದ ಮಾಜಿ ಪ್ರಧಾನಮಂತ್ರಿ ಜಾನ್ ಹೋವಾರ್ಡ್ ಅವರತ್ತ ಗುರುವಾರ ಎಸೆದ ಬೂಟನ್ನು ತಕ್ಷಣವೇ ಕೈಯಲ್ಲಿ ಹಿಡಿದ ವಿದ್ಯಾರ್ಥಿಯೊಬ್ಬ ಸಮಯಪ್ರಜ್ಞೆ ಮೆರೆದಿದ್ದಾನೆ.

ಕೇಂಬ್ರಿಜ್ ಯ‌ೂನಿಯನ್ ಸೊಸೈಟಿಯ ಹಿರಿಯ ಅಧಿಕಾರಿ ಆಂಡ್ರಿವ್ ಚ್ಯಾಪ್‌ಮ್ಯಾನ್, ಆಸ್ಟ್ರೇಲಿಯದ ಪೌರನೊಬ್ಬ ಎಸೆದ ಬೂಟನ್ನು ತಡೆಯಲು ತಾವು ಧಾವಿಸಿದ್ದು ಹೇಗೆಂದು ಬಣ್ಣಿಸಿದ್ದಾರೆ.ಹೋವಾರ್ಡ್ ಮಾತನಾಡಲು ಎದ್ದುನಿಲ್ಲುತ್ತಿದ್ದಂತೆ, ಬೂಟು ಎಸೆದ ವ್ಯಕ್ತಿ ಕೂಗಿಕೊಂಡು, 'ನೀನು ಆಸ್ಟ್ರೇಲಿಯವನು ಎಂದು ಹೇಳಲು ನಾಚಿಕೆಯಾಗುತ್ತದೆ.

ಮನೆಗೆ ಹೋಗು, ಜನಾಂಗೀಯವಾದಿ' ಎಂದು ವ್ಯಕ್ತಿ ಕೂಗಿಕೊಂಡು ಬೂಟನ್ನು ಎಸೆದ. ಅವನು ಬೂಟಿಗೆ ಕೈಹಾಕಿದ್ದನ್ನು ಗಮನಿಸಿದ ಚಾಪ್‌ಮ್ಯಾನ್, ಹೋವಾರ್ಡ್ ಮತ್ತು ವ್ಯಕ್ತಿಯ ನಡುವೆ ಬಂದಿದ್ದಾಗಿಯ‌ೂ, ಅವನ ಎಸೆದ ಬೂಟನ್ನು ಕೈಯಲ್ಲಿ ಹಿಡಿದಿದ್ದಾಗಿ ಹೇಳಿದ್ದಾರೆ. ವಿವಿಯ ಭದ್ರತಾ ಸಿಬ್ಬಂದಿ ಕಟ್ಟಡದಿಂದ ಬೂಟೆಸೆದ ವ್ಯಕ್ತಿಯನ್ನು ಹೊರಕ್ಕೆ ಕರೆದೊಯ್ದಿತು.
ಸಂಬಂಧಿತ ಮಾಹಿತಿ ಹುಡುಕಿ