ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಗ್ನಸ್ಥಿತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಪ್ರೇಮಿ (Camera, Naked, Al-Qaeda, Sun Meng)
Feedback Print Bookmark and Share
 
ಪರಪುರುಷನ ಪತ್ನಿಯ ತೆಕ್ಕೆಯಲ್ಲಿದ್ದ ವ್ಯಕ್ತಿಯೊಬ್ಬ ಆಕ್ರೋಶಿತ ಪತಿಯ ಕೈಯಿಂದ ಪಾರಾಗಲು ನಗ್ನಸ್ಥಿತಿಯಲ್ಲೇ ಕಿಟಕಿಯಿಂದ ಹೊರಕ್ಕೆ ಹಾರಿ ಮಹಡಿಯ ಶೆಲ್ಫ್ ಮೇಲೆ ಅಡಗಿಕೊಂಡ ಚಿತ್ರವನ್ನು ಕ್ಯಾಮೆರಾ ಕಣ್ಣು ಸೆರೆಹಿಡಿದ ಪ್ರಸಂಗ ವರದಿಯಾಗಿದೆ.

ಫ್ಲ್ಯಾಟಿನ ಹೊರಗೆ ಅಡಗಿಕೊಳ್ಳಲು ಯತ್ನಿಸುತ್ತಿದ್ದ ನಗ್ನ ಪುರುಷನ ಅಸಾಮಾನ್ಯ ಚಿತ್ರ ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದು, ಸನ್ ಮೆಂಗ್ ಎಂಬ ಈ ವ್ಯಕ್ತಿಗೆ ಅವನ ಸಮುದಾಯವೇ ದೂರ ಮಾಡಿದೆ. ಚೀನಾದ ಚೆಂಗ್ಡುನ ಫ್ಲ್ಯಾಟೊಂದರಲ್ಲಿ ಪರಪುರುಷನ ಪತ್ನಿ ಜತೆ 25ರ ಪ್ರಾಯದ ಸನ್ ಮೆಂಗ್ ಹಾಸಿಗೆಯಲ್ಲಿದ್ದಾಗ, ಆಕಸ್ಮಿಕವಾಗಿ ಪತಿಯೇ ಪ್ರತ್ಯಕ್ಷನಾದಾಗ, ಅವರ ಕೈಯಿಂದ ತಪ್ಪಿಸಿಕೊಂಡು ಬಾಲ್ಕನಿ ಕಿಟಕಿಯಿಂದ ಹೊರಕ್ಕೆ ಹಾರಿದ.

ಸನ್ ಮೊದಲನೇ ಮಹಡಿಯ ಲೆಡ್ಜ್ ಮೇಲೆ ತೆವಳುತ್ತಿದ್ದರೆ, ಅವನ ಪ್ರೇಯಸಿಯ ಜತೆ ಪತಿ ಘರ್ಷಣೆಗೆ ಇಳಿದ. ಈ ಘಟನೆಯಿಂದ ನನ್ನ ಕುಟುಂಬ ನಾಚಿಕೆಪಟ್ಟಿದ್ದು, ನನ್ನ ನೆರೆಹೊರೆಯವರು ಕೂಡ ಮಾತನಾಡುವುದಿಲ್ಲವೆಂದು ಸನ್ ಆತಂಕ ವ್ಯಕ್ತಪಡಿಸಿದ್ದಾನೆ. ತಾನು ಮಾಡಿದ್ದು ತಪ್ಪು ಎನ್ನುವುದು ನನಗೆ ಗೊತ್ತಿತ್ತು. ಆದರೆ ಪ್ರೇಯಸಿಯ ಪತಿ ಕೊಂದೇ ಬಿಡುತ್ತಾನೆನ್ನುವ ಭಯದಿಂದ ತಾನು ನಗ್ನಸ್ಥಿತಿಯಲ್ಲೇ ಕಿಟಕಿಯಿಂದ ಹಾರಿದ್ದಾಗಿ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸನ್ ಮೆಂಗ್, ಚೀನಾ, ಸನ್, ಚೆಂಗ್ಡು