ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್‌ನಲ್ಲಿ ರಾಹುಲ್, ಶಿಕ್ಷಣ ಕ್ಷೇತ್ರದಲ್ಲಿ ಬಾಂಧವ್ಯಕ್ಕೆ ಕರೆ (Rahul | Musa | Egypt | Arab)
Feedback Print Bookmark and Share
 
ಈಜಿಪ್ಟಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅರಬ್ ಲೀಗ್ ಮುಖ್ಯಸ್ಥ ಅಮರ್ ಮ‌ೂಸಾ ಅವರನ್ನು ಭೇಟಿ ಮಾಡಿ, ಮಧ್ಯಪೂರ್ವ ಮತ್ತು ಭಾರತ-ಪಾಕ್ ಬಾಂಧವ್ಯ ಸೇರಿದಂತೆ ದಕ್ಷಿಣ ಏಷ್ಯಾದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು.

ಪೆಲೆಸ್ಟೀನ್ ಮತ್ತು ಇಸ್ರೇಲ್ ಶಾಂತಿ ಮಾತುಕತೆ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಮತ್ತು ಈ ಕುರಿತು ಒಬಾಮಾ ಆಡಳಿತದ ನಿಲುವು ಮತ್ತು ಎರಡು ರಾಷ್ಟ್ರಗಳನ್ನು ಸ್ಥಾಪಿಸುವ ಪರಿಹಾರಕ್ಕೆ ಇಸ್ರೇಲ್ ಹೇರುತ್ತಿರುವ ಒತ್ತಡ ಮುಂತಾದ ವಿಷಯ ಚರ್ಚಿಸಲಾಯಿತು ಎಂದು ಅರಬ್ ಲೀಗ್ ಹೇಳಿಕೆ ನೀಡಿದೆ.

ಕಾಂಗ್ರೆಸ್ ಸಂಸದ ರಾಹುಲ್ ದೇಶದ ಅಭಿವೃದ್ಧಿ ಸಾಧನೆ, ಬಡತನ ನಿರ್ಮ‌ೂಲನೆ, ಶಿಕ್ಷಣ ವಿಸ್ತರಣೆ ಮತ್ತು ಆರೋಗ್ಯ ಸೇವೆ ಸುಧಾರಣೆ ಮುಂತಾದ ವಿಷಯಗಳ ಬಗ್ಗೆ ಭಾರತದ ತಜ್ಞತೆ ಕುರಿತು ಮ‌ೂಸಾಗೆ ವಿವರಿಸಿದರು.

ಅರಬ್ ಲೀಗ್‌ನ್ನು ಸದಸ್ಯ ರಾಷ್ಟ್ರಗಳ ನಡುವೆ ನಿಕಟ ಬಾಂಧವ್ಯ ಮತ್ತು ಸ್ವಾತಂತ್ರ್ಯ ಮತ್ತು ಸಾರ್ವಬೌಮತೆ ಸಂರಕ್ಷಣೆಗೆ ಸಹಯೋಗಕ್ಕಾಗಿ 1946ರಲ್ಲಿ ಸ್ಥಾಪಿಸಲಾಗಿದೆ. ಪ್ರತಿಷ್ಟಿತ ಕೈರೊ ವಿವಿಯ ವಿದ್ಯಾರ್ಥಿಗಳ ಜತೆ ಸಂವಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಲ್ಲಿ ಬಾಂಧವ್ಯವೃದ್ಧಿಗೆ ರಾಹುಲ್ ಒತ್ತುನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ