ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಿಢೀರ್ ಬಾಗಿಲು ಮುಚ್ಚಿದ ಆಸ್ಟ್ರೇಲಿಯದ 4 ಕಾಲೇಜುಗಳು (Melbourne | Sydney | Private | India)
Feedback Print Bookmark and Share
 
ಆಸ್ಟ್ರೇಲಿಯದ ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಲ್ಲಿ ನಾಲ್ಕು ಖಾಸಗಿ ಕಾಲೇಜುಗಳು ರಾತ್ರೋರಾತ್ರಿ ದಿಢೀರ್ ಬಾಗಿಲು ಮುಚ್ಚಿದ್ದರಿಂದ ಭಾರತೀಯರು ಸೇರಿದಂತೆ ಸುಮಾರು 2000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲವರಿಗೆ ತಮ್ಮ ಪದವಿಪತ್ರವನ್ನು ಪಡೆಯಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿದ್ದಾಗಲೇ ಈ ಘಟನೆ ಸಂಭವಿಸಿದೆ.

ಮೆರಿಡಿಯನ್ ಗ್ರೂಪ್ ನಡೆಸುತ್ತಿದ್ದ ಕಾಲೇಜುಗಳ ಶಿಕ್ಷಕರಿಗೆ ಗುರುವಾರ ರಾತ್ರಿಯಿಂದ ಅವರು ಉದ್ಯೋಗ ಕಳೆದುಕೊಂಡಿದ್ದಾರೆಂದು ತಿಳಿಸಲಾಯಿತು. ಆದರೆ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಕ್ಯಾಂಪಸ್‌ಗಳಿಗೆ ಬಂದಾಗಲೇ ಮುಚ್ಚಿದ ಬಾಗಿಲುಗಳನ್ನು ಕಂಡರು ಎಂದು ಎಬಿಸಿ ಆನ್‌ಲೈನ್ ತಿಳಿಸಿದೆ. ಮೆಲ್ಬೋರ್ನ್ ಮತ್ತು ಸಿಡ್ನಿ ಕಾಲೇಜುಗಳಲ್ಲಿ ಕಲೆತಿದ್ದ ನೂರಾರು ವಿದ್ಯಾರ್ಥಿಗಳು ಮುಚ್ಚಿದ ಬಾಗಿಲುಗಳನ್ನು ಕಂಡು ಆಶ್ಚರ್ಯಚಕಿತರಾದರು.

ಕೇವಲ ಎರಡು ವಾರಗಳಲ್ಲಿ ನಾವು ಪದವಿ ಪಡೆಯಬೇಕೆನ್ನುವಷ್ಟರಲ್ಲಿ ಮುಚ್ಚಿದ ಬಾಗಿಲುಗಳನ್ನು ಕಂಡು ನಿರಾಶೆಯಾಗಿದೆಯೆಂದು ವಿದ್ಯಾರ್ಥಿಯೊಬ್ಬ ಉದ್ಗರಿಸಿದ.ಮೆಲ್ಬೋರ್ನ್‌ ಮತ್ತು ಸಿಡ್ನಿಯ 13 ಕ್ಯಾಂಪಸ್‌ಗಳಲ್ಲಿರುವ ಕಾಲೇಜುಗಳು ಆತಿಥ್ಯ, ವಿನ್ಯಾಸ, ಇಂಗ್ಲಿಷ್ ಭಾಷೆ. ವಿನ್ಯಾಸ ಮತ್ತು ಸೆಕೆಂಡರಿ ಶಿಕ್ಷಣದಲ್ಲಿ ಭೋಧನೆ ನೀಡುತ್ತಿತ್ತು.
ಸಂಬಂಧಿತ ಮಾಹಿತಿ ಹುಡುಕಿ