ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಮುದ್ರಕ್ಕೆ ಇಳಿಯಲಿರುವ ದುಬಾರಿ ಹಡಗು (Oasis | Empire | Voyage | Caribbean)
Feedback Print Bookmark and Share
 
ಸುಮಾರು 1.4 ಶತಕೋಟಿ ಡಾಲರ್ ವೆಚ್ಚದ ಅತ್ಯಂತ ದೊಡ್ಡದಾದ ದುಬಾರಿ ಹಡಗು ಡಿಸೆಂಬರ್‌ನಲ್ಲಿ ತನ್ನ ಚೊಚ್ಚಲ ಪ್ರಯಾಣವನ್ನು ಆರಂಭಿಸಲು ಸಿದ್ಧವಾಗುತ್ತಿದೆ. ಸುಮಾರು ಐದು ವರ್ಷಗಳ ಯೋಜನೆ ಮತ್ತು ನಿರ್ಮಾಣದ ಬಳಿಕ ರಾಯಲ್ ಕ್ಯಾರಿಬಿಯನ್ 'ಓಯಸಿಸ್' ಹಡಗಿಗೆ ಚಾಲನೆ ನೀಡಲಿದೆ.

ಸುಮಾರು 1184 ಅಡಿ ಉದ್ದವಿರುವ ಈ ಹಡಗು ಎಂಪೈರ್ ಸ್ಟೇಟ್ ಕಟ್ಟಡದಷ್ಟು ಎತ್ತರಕ್ಕೆ ಚಾಚಲಿದ್ದು, ಯಾವುದೇ ವಿಶ್ವದರ್ಜೆಯ ಲಾಸ್ ವೆಗಾಸ್ ವಿಹಾರಧಾಮದ ಸೌಲಭ್ಯಗಳನ್ನು ಸರಿಗಟ್ಟುವಂತಹದ್ದಾಗಿದೆ.

ಸುಮಾರು 2160 ಸಿಬ್ಬಂದಿಯಿದ್ದ, 18 ಡೆಕ್‌ಗಳನ್ನು ಹೊಂದಿರುವ ಹಡಗು 5400 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಹಡಗನ್ನು ಫಿನ್ಲೆಂಡ್ ದೇಶದ ತುರ್ಕುನ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅದರ ನಿರ್ಮಾಣ ಸಂಸ್ಥೆ ಆರ್‌ಸಿಐ ಹೇಳಿದೆ. ಈ ಹಡಗು ಸಮುದ್ರಕ್ಕೆ ಇಳಿದ ಮೇಲೆ ಪ್ರಯಾಣಿಕರಿಗೆ ವಿಶಿಷ್ಠ ಅನುಭವ ನೀಡುವ ಸಾಮರ್ಥ್ಯ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಡಗು, ಎಂಪೈರ್ ಸ್ಟೇಟ್, ಓಯಸಿಸ್