ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಗವದ್ಗೀತೆ ಪುಟಗಳಲ್ಲಿ ಕೊಕೇನ್ ಅದ್ದಿ ಕಳ್ಳಸಾಗಣೆ (Bhagvad | Gita | Trinidad | Cocaiine)
Feedback Print Bookmark and Share
 
ಕೇಂದ್ರ ಟ್ರಿನಿಡಾಡ್‌ನ ಕೋವಾದ ಪ್ರಯೋಗಶಾಲೆಯಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ದ್ರವರೂಪದ ಕೊಕೇನ್ ಮಾದಕವಸ್ತುವನ್ನು ಹಿಂದುಗಳ ಪವಿತ್ರಗ್ರಂಥ ಭಗವದ್ಗೀತೆಯ ಪುಟಗಳಲ್ಲಿ ತೋಯಿಸಿದ್ದನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಪೊಲೀಸರು ಪತ್ತೆಹಚ್ಚಿದ್ದು, ಕೊಕೇನ್ ಕಳ್ಳಸಾಗಣೆಗೆ ನೂತನ ವಿಧಾನ ಬಳಸುತ್ತಿದ್ದುದು ಬೆಳಕಿಗೆ ಬಂದಿದೆ.

ಈ ಕುರಿತಂತೆ ವೆನೆಜುವೆಲಾದ ಪೌರ ಮತ್ತು ಟ್ರಿನಿಡಾಡ್ ಮತ್ತು ಟೊಬ್ಯಾಗೊದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಗುರುವಾರ ಬಂಧಿಸಲಾಗಿದ್ದು, ದ್ರವರೂಪದ ಕೊಕೇನ್‌ನ್ನು ಭಗವದ್ಗೀತೆಯ ಪುಟಗಳಲ್ಲಿ ಅದ್ದಿ ಕಳ್ಳಸಾಗಣೆ ಮಾಡುತ್ತಿದ್ದ ನೂತನ ವಿಧಾನದ ಬಗ್ಗೆ ತನಿಖೆಗಳನ್ನು ನಡೆಸುತ್ತಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇಷ್ಟೊಂದು ದ್ರವರೂಪದ ಕೊಕೇನ್ ತಮ್ಮ ಜೀವನದಲ್ಲಿ ಇದೇ ಮೊದಲಬಾರಿಗೆ ಕಂಡಿದ್ದಾಗಿ ಪೊಲೀಸ್ ಕಮೀಷನರ್ ಜೇಮ್ಸ್ ಫಿಲ್‌‍ಬರ್ಟ್ ತಿಳಿಸಿದ್ದಾರೆ.

ಇದು ಹೊಸ ವಿದ್ಯಮಾನವಲ್ಲವೆಂದು ತಿಳಿಸಿರುವ ಫಿಲ್‌ಬರ್ಟ್, ದ್ರವರೂಪದ ಕೊಕೇನ್ ಜೂಸ್ ರೀತಿಯಲ್ಲಿ ಕಾಣುವುದರಿಂದ ಅಧಿಕಾರಿಗಳಿಗೆ ಗಂಭೀರ ಸವಾಲನ್ನು ಒಡ್ಡಿದೆಯೆಂದು ಹೇಳಿದ್ದಾರೆ.

ಕೊಕೇನ್ ಮಾದಕಪದಾರ್ಥವನ್ನು ಭಗವದ್ಗೀತೆಯ ಪುಟಗಳಲ್ಲಿ ಅದ್ದಿರುವುದು ಆಘಾತಕಾರಿ ಸಂಗತಿಯೆಂದು ಹೇಳಿದ ಅವರು, ಹರಿದ ಪುಟಗಳಿಂದ ಕೊಕೇನ್ ದ್ರವದಿಂದ ಅದ್ದಿದ ಭಗವದ್ಗೀತೆಯ ಪುಟಗಳು ತಾವು ಕಂಡ ಅತ್ಯಂತ ದೌರ್ಬಾಗ್ಯದ ಸಂಗತಿಯೆಂದು ಅವರು ಹೇಳಿದ್ದಾರೆ. ದಕ್ಷಿಣ ಅಮೆರಿಕದಿಂದ ಅಮೆರಿಕ ಮತ್ತು ಕೆನಡಾಗೆ ಬರುವ ಕೊಕೇನ್‌ಗೆ ತೈಲಸಮೃದ್ಧ ರಾಷ್ಟ್ರವು ಸಾಗಣೆ ಮಾರ್ಗವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ