ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ಅಪಘಾತಕ್ಕೆ 9 ಜನರು ಬಲಿ (Moscow | Military | Plane | Tatarsky)
Feedback Print Bookmark and Share
 
ರಷ್ಯಾದ ದೂರದ ಪೂರ್ವದಲ್ಲಿ ಮಿಲಿಟರಿ ವಿಮಾನವೊಂದು ಅಪಘಾತಕ್ಕೀಡಾಗಿ 9 ಜನರು ಹತರಾಗಿದ್ದಾರೆ. ಟಿಯು-142-ಎಂ3 ಸಬ್‌ಮೆರಿನ್ ನಿಗ್ರಹ ಟರ್ಬೊಪ್ರಾಪ್ ವಿಮಾನವು ಪೆಸಿಫಿಕ್ ತೀರದಿಂದ 20 ಕಿಮೀ ದೂರದ ಟಟಾರ್ಸ್ಕಿ ಜಲಸಂಧಿಯಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆಯೆಂದು ಇಟಾರ್ ಟಾಸ್ ವರದಿ ಮಾಡಿದೆ.

ತರಬೇತಿ ಹಾರಾಟ ಮುಗಿಸುತ್ತಿದ್ದಂತೆ ರೆಡಾರ್ ಪರದೆಯಿಂದ ವಿಮಾನ 11 ಜಿಎಂಟಿ ಬಳಿಕದ ಸ್ವಲ್ಪ ಹೊತ್ತಿನಲ್ಲೇ ಕಣ್ಮರೆಯಾಯಿತೆಂದು ಇಂಟರ್‌ಫ್ಯಾಕ್ಸ್ ಸುದ್ದಿಏಜನ್ಸಿ ರಕ್ಷಣಾ ಸಚಿವಾಲಯದ ಅಧಿಕಾರಿನ್ನು ಉಲ್ಲೇಖಿಸಿ ತಿಳಿಸಿದೆ.

ತುರ್ತು ಕಾರ್ಯಾಚರಣೆ ದೋಣಿಗಳು ನೀರಿನಿಂದ ವಿಮಾನದ ಅವಶೇಷಗಳನ್ನು ಮತ್ತು ಮೃತಸಿಬ್ಬಂದಿಯ ದೇಹಗಳನ್ನು ಹೊರತೆಗೆದಿದ್ದಾರೆಂದು ಅಧಿಕಾರಿ ಹೇಳಿದ್ದಾರೆ. ಸೋವಿಯಟ್ ನೌಕಾಪಡೆ ವ್ಯಾಪಕವಾಗಿ ಟಿಯು-142-ಎಂ3 ವಿಮಾನವನ್ನು ನೌಕಾ ಪಹರೆ ವಿಮಾನವಾಗಿ ಬಳಸುತ್ತಿತ್ತು.
ಸಂಬಂಧಿತ ಮಾಹಿತಿ ಹುಡುಕಿ