ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ಲೋರಿಡಾದ ಕಟ್ಟಡದಲ್ಲಿ ಶೂಟಿಂಗ್‌ಗೆ ಒಬ್ಬರು ಬಲಿ (Rodriguez | Orlando | Washington | Florida)
Feedback Print Bookmark and Share
 
ಫ್ಲೋರಿಡಾದ ಒರ್ಲಾಂಡೊದ ಗಗನಚುಂಬಿ ಕಟ್ಟಡವೊಂದರಲ್ಲಿ ನಡೆದ ಶೂಟಿಂಗ್‌ನಲ್ಲಿ ಕನಿಷ್ಠ ಒಬ್ಬರು ಸತ್ತಿದ್ದು, ಐವರು ಗಾಯಗೊಂಡಿದ್ದಾರೆ. ಶಂಕಿತ ಜಾಸನ್ ರೋಡ್ರಿಗ್ ಒರ್ಲಾಂಡೊದ ಮಾಜಿ ಮಾಲೀಕನ ಕಚೇರಿಗಳಲ್ಲಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಅವನನ್ನು ಅವನ ತಾಯಿಯ ನಿವಾಸದಲ್ಲಿ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಎಂಜಿನಿಯರಿಂಗ್ ಸಂಸ್ಥೆ ರೆನಾಲ್ಡ್ಸ್‌ನ ಮಾಜಿ ನೌಕರನಾದ ರಾಡ್ರಿಗ್‌ನನ್ನು ಸಾಧನೆ ತೋರಿಸಿರದ ಕಾರಣಗಳಿಂದಾಗಿ ಎರಡು ವರ್ಷಗಳಿಗೆ ಮುಂಚಿತವಾಗಿಯೇ ತೆಗೆಯಲಾಗಿತ್ತು. ಶೂಟಿಂಗ್ ಘಟನೆ ನಡೆದ ಬಳಿಕ ರೋಡ್ರಿಗ್‌ನನ್ನು ಹುಡುಕುವ ಭರದಲ್ಲಿ ಒರ್ಲಾಂಡೊ ಪೊಲೀಸರು ನಗರಕೇಂದ್ರದ ಬಹುಭಾಗವನ್ನು ಮುಚ್ಚಬೇಕಾಯಿತು.

ಸಮೀಪದ ಆಸ್ಪತ್ರೆಗಳಲ್ಲಿ ಗಾಯಗೊಂಡ ಐವರ ಸ್ಥಿತಿ ಸ್ಥಿರವಾಗಿದೆ.ಟೆಕ್ಸಾಸ್ ಫೋರ್ಟ್‌ಹುಡ್‌ನಲ್ಲಿ ಸೇನಾ ನೆಲೆಯ ಮೇಲೆ ಶೂಟ್‌ಔಟ್ ಘಟನೆಯಲ್ಲಿ ಸೇನೆಯ ಮಾನಸಿಕತಜ್ಞನೊಬ್ಬ 13 ಜನರನ್ನು ಹತ್ಯೆಮಾಡಿ 30 ಜನರನ್ನು ಗಾಯಗೊಳಿಸಿದ ಘಟನೆ ಮಾಸಿಹೋಗುವ ಮುನ್ನವೇ ಈ ಘಟನೆ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ