ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯ: ಡ್ರೈವಿಂಗ್ ಲೈಸೆನ್ಸ್‌ಗಿಂತ ವಿಚ್ಛೇದನ ಸುಲಭ (Australia | Family Court | Divorce | Licence)
Feedback Print Bookmark and Share
 
ಆಸ್ಟ್ರೇಲಿಯದಲ್ಲಿ ವಿಚ್ಛೇದನ ನೀಡುವುದು ಚಾಲಕನ ಪರವಾನಗಿ ಸಂಪಾದಿಸುವುದಕ್ಕಿಂತ ಬಹಳ ಸುಲಭವಾಗಿದ್ದು, ಮದುವೆಗೆ ಇತಿಶ್ರೀ ಹೇಳಲು ಕುಟುಂಬದ ಕೋರ್ಟ್ ಈ-ಫೈಲಿಂಗ್ ಜಾರಿಗೆ ತಂದ ಬಳಿಕ ವಿಚ್ಧೇದನ ಪಡೆಯುವುದು ಬಹಳ ಸುಲಭವಾಗಿದೆ. ಹೊಸ ನಿಯಮದ ಪ್ರಕಾರ, ವಿಚ್ಛೇದನ ಅರ್ಜಿದಾರರು ಆಡಳಿತಾತ್ಮಕ ಪ್ರಕ್ರಿಯೆಯನ್ನು ಆನ್‌ಲೈನ್‌ ಮ‌ೂಲಕವೇ ಮುಗಿಸಬಹುದಾಗಿದೆ.

ಕಳೆದ ಸೆ.26ರಿಂದ ಈ ಫೈಲಿಂಗ್ ವಿಚ್ಥೇದನ ವ್ಯವಸ್ಥೆ ಜಾರಿಗೆ ತಂದಾಗಿನಿಂದ ಸುಮಾರು 260 ಜನರು ವಿಚ್ಛೇದನಕ್ಕಾಗಿ ಈ ಫೈಲಿಂಗ್ ಮ‌ೂಲಕ ಅರ್ಜಿ ಸಲ್ಲಿಸಿದ್ದಾರೆ.ಈ ಸೇವೆ ಪಡೆದುಕೊಳ್ಳಲು ಅರ್ಜಿದಾರರು ಫ್ಯಾಮಿಲಿಕೋರ್ಟ್.ಗವ್.ಅವ್.ನಲ್ಲಿ ದಾಖಲಿಸಿ ತಮ್ಮ ವಿವಾಹ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪಲೋಡ್ ಮಾಡಿ, ಕ್ರೆಡಿಟ್ ಕಾರ್ಡ್ ಮ‌ೂಲಕ 430 ಡಾಲರ್ ಪಾವತಿ ಮಾಡಿದರೆ ಸಾಕು ವಿಚ್ಛೇದನ ಪ್ರಕ್ರಿಯೆ ಮುಗಿದಂತಾಗುತ್ತದೆ.

ಆದರೆ ಇಷ್ಟೊಂದು ಸುಲಭದ ವಿಧಾನದ ವಿಚ್ಛೇದನವನ್ನು ಆಸ್ಟ್ರೇಲಿಯ ಕುಟುಂಬದ ಒಕ್ಕೂಟದ ವಕ್ತಾರ ಜಾನ್ ಮಾರಿಸೆ ರದ್ದುಮಾಡಬೇಕೆಂದು ಆಗ್ರಹಿಸಿದ್ದಾರೆ. ಇದರಿಂದಾಗಿ 20 ವರ್ಷಗಳಿಂದ ಕಡಿಮೆ ಪ್ರಮಾಣದಲ್ಲಿದ್ದ ವಿಚ್ಛೇದನ ಇನ್ನಷ್ಟು ಏರಿಕೆಯಾಗುತ್ತೆದೆಂದು ಅವರು ಶಂಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ