ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾತ್ರಿಕ್ಲಬ್ ಕಚ್ಚಾಟ: ಮಿಸ್ ಇಂಗ್ಲೆಂಡ್ ಪ್ರಶಸ್ತಿ ವಾಪಸು (Beauty pageant | Miss England | Christie | Nightclub)
Feedback Print Bookmark and Share
 
ಇನ್ನೊಬ್ಬಳು ಸೌಂದರ್ಯ ರಾಣಿ ಜತೆ ರಾತ್ರಿಕ್ಲಬ್ ಕಚ್ಚಾಟದಲ್ಲಿ ಭಾಗಿಯಾದ ಮಿಸ್ ಇಂಗ್ಲೆಂಡ್ ಪ್ರಶಸ್ತಿ ವಿಜೇತೆ ಸೌಂದರ್ಯ ರಾಣಿ ತನ್ನ ಕಿರೀಟವನ್ನು ಶುಕ್ರವಾರ ವಾಪಸು ನೀಡಿದ್ದಾಳೆ.

ಮಾಜಿ ಬ್ರಿಟನ್ ಒಲಿಂಪಿಕ್ ಚಿನ್ನದ ಪದಕ ವಿಜೇತ ಲಿನ್ಫೋರ್ಡ್ ಕ್ರಿಸ್ಟಿಯ ಸೋದರಸೊಸೆ ರಾಕೆಲ್ ಕ್ರಿಸ್ಟಿ ಮಿಸ್ ಮ್ಯಾಂಚೆಸ್ಟರ್ ಸಾರಾ ಜೋನ್ಸ್ ಜತೆ ರಾತ್ರಿಕ್ಲಬ್‌ನಲ್ಲಿ ಮಾರಾಮಾರಿಗೆ ಇಳಿದಿದ್ದರಿಂದ ಬಂಧಿಸಲಾಗಿತ್ತು.ಕಳೆದ ಜುಲೈನಲ್ಲಿ ಕಪ್ಪುಸುಂದರಿ ವಿಜೇತೆಯೆಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದ ಕ್ರಿಸ್ಟೀ, ಗ್ಲೇಡಿಯೇಟರ್ಸ್ ಟಿವಿ ಶೋನಲ್ಲಿ ಕಾಣಿಸಿಕೊಂಡ ತನ್ನ ಗೆಳೆಯನ ಕುರಿತಂತೆ ಜೋನ್ಸ್ ಜತೆ ಜಗಳವಾಡಿ ಮುಖಕ್ಕೆ ಗುದ್ದಿದ್ದಾಳೆಂದು ಆರೋಪಿಸಲಾಗಿತ್ತು.

ಮಾಧ್ಯಮಗಳಲ್ಲಿ ಈ ಕುರಿತು ಪ್ರಚಾರಗೊಂಡಿದ್ದರಿಂದ ಭುವನಸುಂದರಿ ಸ್ಪರ್ಧೆಯಿಂದ ಹಿಂತೆಗೆದುಕೊಂಡು, ಮಿಸ್ ಇಂಗ್ಲೆಂಡ್ ಕಿರೀಟ ವಾಪಸಿಗೆ ಕ್ರಿಸ್ಟೀ ನಿರ್ಧರಿಸಿದ್ದಾಳೆಂದು ಸೌಂದರ್ಯಸ್ಪರ್ಧೆಯ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ