ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಯಾರ್ಕ್‌ನಲ್ಲಿ ಟಾಯ್ಲೆಟ್ ಕೆಲಸಕ್ಕೆ ನೂರಾರು ಅರ್ಜಿ (Toilet jobs | New York | Restrooms | Times Square)
Feedback Print Bookmark and Share
 
ನ್ಯೂಯಾರ್ಕ್‌ನಲ್ಲಿ ರೆಸ್ಟ್‌ರೂಂ ಅಂಬಾಸಿಡರ್ ಹುದ್ದೆಯಲ್ಲಿ ಕೆಲಸ ಮಾಡಲು ಉತ್ಸಾಹಿ ಅರ್ಜಿದಾರರು ಬೇಕಾಗಿದ್ದು, ಒಳ್ಳೆಯ ವೇತನ ನೀಡಲಾಗುವುದು. ಇದು ಯಾವುದೇ ದೇಶಕ್ಕೆ ರಾಯಭಾರಿ ಹುದ್ದೆಯೆಂದು ಭಾವಿಸಬೇಕಿಲ್ಲ. ಅಮೆರಿಕದ ಆರ್ಥಿಕ ಹಿಂಜರಿತದ ಮಧ್ಯೆ, ಟೈಮ್ಸ್ ಚೌಕದ ರೆಸ್ಟ್‌ರೂಂನಲ್ಲಿ ಅರ್ಥಾತ್ ಶೌಚಾಲಯದಲ್ಲಿ 6 ವಾರಗಳ ಕೆಲಸಕ್ಕೆ 10,000 ಡಾಲರ್ ವೇತನದ ಭರವಸೆಯನ್ನು ಮೇಲಿನ ಜಾಹೀರಾತಿನಲ್ಲಿ ನೀಡಲಾಗಿದೆ.

ಈ ಭರವಸೆ ಮೇಲೆ ಅತಿಥಿಗಳ ಜತೆ ಸಮಾಲೋಚನೆ ನಡೆಸಲು ನೂರಾರು ಜನರು ಅರ್ಜಿ ಗುಜರಾಯಿಸಿದ್ದಾರೆ. ಅತಿಥಿಗಳನ್ನು ಸ್ವಾಗತಿಸುವುದಲ್ಲದೇ ಐವರು ಅದೃಷ್ಟವಂತ ಅರ್ಜಿದಾರರು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ತಮ್ಮ ಅನುಭವಗಳ ಬಗ್ಗೆ ಟೀಕೆ, ಟಿಪ್ಪಣಿ ಬರೆಯಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟಾಯ್ಲೆಟ್ ಪೇಪರ್ ತಯಾರಕ ಚಾರ್ಮಿನ್ ರಜಾದಿನಗಳಲ್ಲಿ ಪ್ರವಾಸಿಗಳ ಸೌಲಭ್ಯಕ್ಕೆ ಶೌಚಾಲಯಗಳನ್ನು ಸ್ಥಾಪಿಸಿದ್ದರು.

ಈ ವರ್ಷ ಐದು ಶೌಚಾಲಯ ರಾಯಭಾರಿಗಳ ಮ‌ೂಲಕ ಅನುಭವ ವಿಸ್ತರಣೆಗೆ ಕಂಪೆನಿ ಬಯಸಿದೆ. ಟಾಯ್ಲೆಟ್‌ಗಳ ಉದ್ಘಾಟನೆ ಸಮಾರಂಭವಾದ ನ.23ರಂದು ವಿಜೇತರನ್ನು ಪ್ರಕಟಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ