ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಮೇಲೆ ದಾಳಿ ಸಂಚು: ಖಾಯಿದಾ ವಿಡಿಯೊ ಪತ್ತೆ (Lashkar | Chicago | Al-Qaeda | India)
Feedback Print Bookmark and Share
 
ಲಷ್ಕರೆ ತೊಯ್ಬಾ ಭಾರತದಲ್ಲಿ ಮತ್ತೆ ಭಯೋತ್ಪಾದನೆ ದಾಳಿ ನಡೆಸಲು ಇಬ್ಬರು ಪಾಕಿಸ್ತಾನ ಸಂಜಾತ ಚಿಕಾಗೊ ವ್ಯಕ್ತಿಗಳ ಜತೆ ಸಂಚು ನಡೆಸಿರುವುದು ಹೊಸ ತಿರುವು ಪಡೆದಿದ್ದು, ಎಫ್‌ಬಿಐ ಏಜೆಂಟರು ಚಿಕಾಗೊ ವ್ಯಕ್ತಿಯೊಬ್ಬನ ಮನೆಯಲ್ಲಿ ಅಲ್ ಖಾಯಿದಾದ ಪ್ರಚೋದನಾತ್ಮಕ ವಿಡಿಯೊಗಳನ್ನು ಪತ್ತೆಹಚ್ಚಿದ್ದಾರೆ.

ಪಾಕಿಸ್ತಾನದಲ್ಲಿ ಹುಟ್ಟಿದ ಕೆನಡಾ ಪೌರ ತಹವಾರ್ ಹುಸೇನ್ ರಾನಾ ಮನೆಯಿಂದ ಈ ವಿಡಿಯೊಗಳನ್ನು ಪತ್ತೆಹಚ್ಚಿದ್ದಾರೆ. ಕಳೆದ ತಿಂಗಳು ರಾನಾನನ್ನು ಇನ್ನೊಬ್ಬ ಆರೋಪಿ ಡೇವಿಡ್ ಕೋಲ್‌ಮ್ಯಾನ್ ಹೆಡ್ಲೆ ಜತೆಯಲ್ಲಿ ಬಂಧಿಸಲಾಗಿತ್ತು. ಈ ವಿಡಿಯೊಗಳು ಒಸಾಮಾ ಬಿನ್ ಲಾಡೆನ್ ಮತ್ತಿತರ ಭಯೋತ್ಪಾದಕ ನಾಯಕರ ಭಾಷಣಗಳನ್ನು ಒಳಗೊಂಡಿತ್ತೆಂದು ತಿಳಿದುಬಂದಿದೆ.

ಇವರಿಬ್ಬರು ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜು, ಡೆಹ್ರಾಡೂನ್ ಡೂನ್ ಶಾಲೆ ಮತ್ತು ಮುಸ್ಸೌರಿ ವುಡ್‌ಸ್ಟಾಕ್ ಮೇಲೆ ದಾಳಿಗೆ ಯೋಜಿಸಿದ್ದರಲ್ಲದೇ ಲಷ್ಕರೆ ತೊಯ್ಬಾ ಕುಮ್ಮಕ್ಕಿನ ಮೇಲೆ ಇನ್ನೂ ಕೆಲವು ಕಡೆ ದಾಳಿಗೆ ಸಂಚು ರೂಪಿಸಿದ್ದರೆಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಭಾರತದ ಐಬಿ ಮತ್ತು ರಾ ಸಂಸ್ಥೆಗಳು ತನಿಖೆಯಲ್ಲಿ ಎಫ್‌ಬಿಐಗೆ ನೆರವಾಗಲು ಅಮೆರಿಕಕ್ಕೆ ತೆರಳಿವೆ. ಪಾಕಿಸ್ತಾನಕ್ಕೆ ಅನೇಕ ಬಾರಿ ಪ್ರಯಾಣಿಸಿ ಲಷ್ಕರೆ ತೊಯ್ಬಾ ಜತೆ ಸತತ ಸಂಪರ್ಕದಲ್ಲಿದ್ದ ಹೆಡ್ಲೆಯನ್ನು ನಿರ್ದಿಷ್ಟವಾಗಿ ಪ್ರಶ್ನಿಸಲು ಅವರು ಬಯಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ