ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರದಲ್ಲಿ ಕಾರ್‌ಬಾಂಬ್ ಸ್ಫೋಟಕ್ಕೆ 10 ಬಲಿ (Peshawar | Car bomb | Blast | Pakistan)
Feedback Print Bookmark and Share
 
ಪಾಕಿಸ್ತಾನದ ವಾಯವ್ಯ ಪೇಶಾವರ ನಗರದಲ್ಲಿ ಸ್ಥಳೀಯ ಮೇಯರ್ ನಿವಾಸದ ಹೊರಗೆ ಆತ್ಮಾಹುತಿ ಬಾಂಬರ್ ಕಾರೊಂದನ್ನು ಸ್ಫೋಟಿಸಿದ್ದರಿಂದ ಕನಿಷ್ಠ 10 ಜನರು ಬಲಿಯಾಗಿದ್ದು, 20 ಜನರು ಗಾಯಗೊಂಡಿದ್ದಾರೆ.

ಮೇಯರ್ ಅವರು ಸ್ಥಳೀಯ ಜಾನುವಾರು ಮಾರುಕಟ್ಟೆಯ ಬಳಿಯ ಅತಿಥಿಗೃಹದ ಹೊರಗೆ ತಮ್ಮನ್ನು ಭೇಟಿ ಮಾಡಿದ್ದ ಕೆಲವರೊಂದಿಗೆ ಮೇಯರ್ ನಿಂತಿದ್ದಾಗ ಕಾರಿನಲ್ಲಿ ಧಾವಿಸಿಬಂದ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡ ಎಂದು ಪೇಶಾವರ ಜಿಲ್ಲಾಡಳಿತ ಮುಖ್ಯಸ್ಥ ತಿಳಿಸಿದ್ದಾರೆ. ತಾಲಿಬಾನ್ ಉಗ್ರರ ವಿರುದ್ಧ ಜನರ ಸೇನೆಯನ್ನು ನಿರ್ಮಿಸಿದ ಸ್ಥಳೀಯ ರಾಜಕಾರಣಿ ಅಬ್ದುಲ್ ಮಲಿಕ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯ ನಿಜಾಂ ಅಥವಾ ಮೇಯರ್ ಅಬ್ದುಲ್ ಮಲಿಕ್ ಮತ್ತು ಯುವತಿಯೊಬ್ಬಳು ಸತ್ತಿರುವ 8 ಜನರಲ್ಲಿ ಒಳಗೊಂಡಿದ್ದಾರೆಂದು ಅವರು ಹೇಳಿದ್ದಾರೆ. ಸ್ಥಳೀಯ ಕಾಲಮಾನ 9.30ರ ಬಳಿಕ ಮಾರುಕಟ್ಟೆ ಜನರಿಂದ ಕಿಕ್ಕಿರಿದು ತುಂಬಿದ್ದಾಗ ಬಾಂಬರ್ ಸ್ಫೋಟಿಸಿಕೊಂಡ.

ಮಲಿಕ್ ಮೇಲೆ ದಾಳಿ ಮಾಡುವುದು ಉಗ್ರಗಾಮಿಗಳ ಗುರಿಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮಲಿಕ್ ಅನೇಕ ಬಾರಿ ಹತ್ಯೆಪ್ರಯತ್ನಗಳಿಂದ ಪಾರಾಗಿದ್ದರು. ತಾಲಿಬಾನ್‌ಗೆ ನಿಕಟವರ್ತಿಯಾಗಿದ್ದ ಅವರು, ಬಳಿಕ ತಾಲಿಬಾನಿಗಳ ವಿರುದ್ದ ತಿರುಗಿಬಿದ್ದರು. ಆತ್ಮಾಹುತಿ ದಾಳಿಗೆ ತಾಲಿಬಾನ್ ವಿರುದ್ಧ ಅಧಿಕಾರಿಗಳು ತಮ್ಮ ಬೆಟ್ಟು ತೋರಿಸಿದ್ದರೂ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ