ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಹೈಕಮೀಷನ್ ಮೇಲೆ ದಾಳಿ ಸಂಚು ಬಯಲು (Dhaka | Pakistan | LeT | Bangla)
Feedback Print Bookmark and Share
 
ಅಮೆರಿಕ ಮತ್ತು ಲಂಡನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಬಾಂಗ್ಲಾದೇಶದ ರಾಯಭಾರ ಕಚೇರಿಗಳು ಪಾಕಿಸ್ತಾನ ಮ‌ೂಲದ ಭಯೋತ್ಪಾದನೆ ಸಂಘಟನೆ ಲಷ್ಕರೆ ತೊಯ್ಬಾದ ಗುರಿಯಾಗಿತ್ತು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಬಾಂಗ್ಲಾದೇಶ ಪೊಲೀಸರು ಇಬ್ಬರು ಲಷ್ಕರೆ ಕಾರ್ಯಕರ್ತರು ಸೇರಿದಂತೆ ಮ‌ೂವರು ಭಯೋತ್ಪಾದಕ ಶಂಕಿತರನ್ನು ಮತ್ತು ಅವರ ಹುಜಿ ಸಹಚರನನ್ನು ಚಿತ್ತಗಾಂಗ್‌ನಲ್ಲಿ ಬಂಧಿಸಿದ್ದು, ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾಗಿ ಹೇಳಿದ್ದಾರೆ. ಮ‌ೂವರು ಶಂಕಿತ ಉಗ್ರಗಾಮಿಗಳನ್ನು ತನಿಖೆ ನಡೆಸಿದಾಗ ಇನ್ನೆರಡು ರಾಯಭಾರ ಕಚೇರಿಗಳ ಜತೆಗೆ ಭಾರತದ ರಾಯಭಾರ ಕಚೇರಿಗಳ ಮೇಲೂ ದಾಳಿಗೆ ಯೋಜಿಸಿದ ಸಂಗತಿ ಬಯಲಾಗಿದೆ ಎಂದು ತನಿಖೆಗೆ ಸಮೀಪದ ಅಧಿಕಾರಿ ತಿಳಿಸಿದ್ದಾರೆ.

ಎಲ್‌ಇಟಿಯ ಸ್ಥಳೀಯ ಕಾರ್ಯಕರ್ತರು ಮತ್ತು ಹುಜಿಯ ಬಾಂಗ್ಲಾದೇಶಿ ಸಹಚರ ಪಾಕಿಸ್ತಾನದ ಎಲ್‌ಇಟಿ ಹೈಕಮಾಂಡ್‌ನಿಂದ ದೂರವಾಣಿಯಲ್ಲಿ ಸಂದೇಶ ಸ್ವೀಕರಿಸಿದ್ದರು.ಇಬ್ಬರು ಎಲ್‌ಇಟಿ ಕಾರ್ಯಕರ್ತರನ್ನು ಶಾಹಿದುಲ್ ಇಸ್ಲಾಂ ಮತ್ತು ಅಲ್ ಅಮೀನ್ ಅಲಿಯಾಸ್ ಸೈಫುಲ್ ಹಾಗೂ ಹುಜಿ ಕಾರ್ಯಕರ್ತ ಮುಫ್ತಿ ಹಾರುನ್ ಇಝಾರ್ ಎಂದು ಗುರುತಿಸಲಾಗಿದೆ. ಇಬ್ಬರು ಲಷ್ಕರೆ ಕಾರ್ಯಕರ್ತರಲ್ಲಿ ಒಬ್ಬ ಭಾರತೀಯ ಪೌರನಾಗಿದ್ದು, ಇನ್ನೊಬ್ಬ ಪಾಕಿಸ್ತಾನಿಯೆಂದು ಪತ್ತೆದಾರಿ ವಿಭಾಗದ ಮ‌ೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ