ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಲ್ ಸಾಲ್ವಡೋರ್‌ ಪ್ರವಾಹಕ್ಕೆ 100 ಬಲಿ (Salvador | Caribbean | Ida | San Vicente)
Feedback Print Bookmark and Share
 
ಎಲ್‌ಸಾಲ್ವಡೋರ್‌ನಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಸುಮಾರು 100ಕ್ಕೂ ಹೆಚ್ಚು ಜನರು ಸತ್ತಿದ್ದಾರೆಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

ಸಾನ್ ಸಲ್ವಡೋರ್‌ನಲ್ಲಿ 60ಕ್ಕೂ ಹೆಚ್ಚು ಜನರು ಸತ್ತಿದ್ದು, ಭಾನುವಾರ ಇನ್ನೂ 60 ಮಂದಿ ನಾಪತ್ತೆಯಾಗಿದ್ದಾರೆ.ಸಾನ್ ವಿಸೆಂಟೆ ಮತ್ತು ಚಿಂಚೋನ್‌ಟೆಪೆಕ್ ಅಗ್ನಿಪರ್ವತದ ನೆಲೆಯ ಸುತ್ತಮುತ್ತಲ ಪ್ರದೇಶಗಳು ಭೂಕುಸಿತದಲ್ಲಿ ಮಣ್ಣುಪಾಲಾಗಿವೆ.

ಒಂದು ಭೂಕುಸಿತ 8 ಕಿಮೀ ಪ್ರದೇಶವನ್ನು ವಿಸ್ತರಿಸಿದ್ದು, ಅನೇಕ ಪಟ್ಟಣಗಳು ನಾಶವಾಗಿವೆ. ತೀವ್ರ ಶೀತಹವೆ ಮತ್ತು ಕ್ಯಾರಿಬಿಯನ್ ಚಂಡಮಾರುತ ಇಡಾ ಪ್ರಭಾವದಿಂದ ಸಂಭವಿಸಿದ ಮಳೆಯ ಆರ್ಭಟಕ್ಕೆ ದಕ್ಷಿಣ ಮೆಕ್ಸಿಕೊದ ಇತರೆ ಪ್ರದೇಶಗಳಲ್ಲಿ ಹಾನಿ ಉಂಟುಮಾಡಿದ್ದು, ಸುಮಾರು 200,000 ಜನರು ಸಂತ್ರಸ್ತರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ