ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಡೋನೇಶಿಯ ಭೂಕಂಪ: 38 ಜನರಿಗೆ ಗಾಯ (Jakarta, Indonesia, Richter scale, Bima)
Feedback Print Bookmark and Share
 
ಇಂಡೊನೇಶಿಯ ಪೂರ್ವ ಭಾಗದಲ್ಲಿ ರಿಕ್ಟರ್‌ಮಾಪಕದಲ್ಲಿ 6.7 ತೀವ್ರತೆಯ ಭೂಕಂಪ ಸೋಮವಾರ ಬೆಳಿಗ್ಗೆ ಅಪ್ಪಳಿಸಿದ್ದರಿಂದ ಕನಿಷ್ಠ 38 ಜನರು ಗಾಯಗೊಂಡಿದ್ದು, ಅನೇಕ ಮನೆಗಳು, ಶಾಲೆ ಕಟ್ಟಡಗಳು ಮತ್ತು ಆಸ್ಪತ್ರೆಯೊಂದು ಕುಸಿದುಬಿದ್ದಿವೆ. ವೆಸ್ಟ್ ನೂಸಾ ಟೆಂಗಾರಾ ಪ್ರಾಂತ್ಯದ ಬಿಮಾ ನಗರ ಭೂಕಂಪದ ಕೇಂದ್ರಬಿಂದುವಿಗೆ ಸಮೀಪದಲ್ಲಿದ್ದು ತೀವ್ರ ಹಾನಿ ಸಂಭವಿಸಿದೆ.

ಒಂದು ಆರೋಗ್ಯ ಕ್ಲಿನಿಕ್, ನಾಲ್ಕು ಶಾಲೆ ಕಟ್ಟಡಗಳು ಮತ್ತು 10 ಮನೆಗಳು ಭೂಕಂಪಕ್ಕೆ ಕುಸಿದಿದ್ದು, 50 ಮನೆಗಳಿಗೆ ಹಾನಿಯಾಗಿದೆಯೆಂದು ಕ್ಸಿನುವಾ ವರದಿ ತಿಳಿಸಿದೆ. ಜಕಾರ್ತ ಕಾಲಮಾನ 2.41ಕ್ಕೆ ಭೂಕಂಪ ಸಂಭವಿಸಿದ್ದು,ಅದರ ಕೇಂದ್ರಬಿಂದು ರಾಬಾದ ನೈರುತ್ಯಕ್ಕೆ 28 ಕಿಮೀ ದೂರದಲ್ಲಿ ಮತ್ತು 25 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ಕೇಂದ್ರಬಿಂದು 7ರಷ್ಟು ಇದ್ದಾಗಲೇ ಹಾನಿ ನಿರ್ವಹಣೆ ಏಜನ್ಸಿ ಸುನಾಮಿ ಎಚ್ಚರಿಕೆ ನೀಡುತ್ತದೆ. ಭೂಕಂಪದಿಂದಾಗಿ ಬಿಮಾ ನಿವಾಸಿಗಳು ಭಯಭೀತರಾಗಿದ್ದಾರೆಂದು ಬಿಮಾ ಮಿಲಿಟರಿ ಕಮಾಂಡ್ ಅಧಿಕಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಂಡೊನೇಶಿಯ, ಬಿಮಾ, ಭೂಕಂಪ