ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನ್ ಮೇಲೆ ಭಾರತದ ಗುಪ್ತಚರ ಪ್ರಭಾವ: ಮುಷರಫ್ (Musharra | Afghan | Pakistan | ISI)
Feedback Print Bookmark and Share
 
ಆಫ್ಘಾನಿಸ್ತಾನವು ಭಾರತದ ಗುಪ್ತಚರ ಸಂಸ್ಥೆಗಳ ಪ್ರಭಾವದಲ್ಲಿ ಸಿಲುಕಿದೆಯೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಪಿಸಿದ್ದಾರೆ. ಸಿಎನ್‌ಎನ್ ಜತೆ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷರಫ್, 'ಆಫ್ಘಾನ್ ಅಧ್ಯಕ್ಷ, ಆಫ್ಘಾನ್ ಸರ್ಕಾರ, ಆಫ್ಘಾನ್ ಗುಪ್ತಚರ ದಳದ ಬಗ್ಗೆ ಮಾತನಾಡುವುದೇ ಬೇಡ. ಅವರು ಏನು ಮಾಡುತ್ತಾರೆಂದು ತಮಗೆ ಗೊತ್ತಿದೆ.

ಅವರು ಜಗತ್ತನ್ನೇ ದಾರಿತಪ್ಪಿಸುತ್ತಿದ್ದಾರೆಂದು' ಮುಷರಫ್ ಹೇಳಿದರು. ಆಫ್ಘಾನಿಸ್ತಾನ ಭಾರತದ ಪ್ರಭಾವಕ್ಕೆ ಒಳಗಾಗಿದೆಯೆಂಬ ದೃಷ್ಟಿಕೋನ ಹೊಂದಿರುವುದರಿಂದ ಆಫ್ಘಾನಿಸ್ತಾನ ಯಶಸ್ಸಿನಲ್ಲಿ ನಿಜವಾಗಲೂ ನೆರವು ನೀಡಲು ಪಾಕಿಸ್ತಾನಕ್ಕೆ ಇಷ್ಟವಿಲ್ಲವೇ ಎಂಬ ಪ್ರಶ್ನೆಗೆ ಹಾಗೇನೂ ಇಲ್ಲವೆಂದು ನುಡಿದರು. ನಾನು ಹೇಳುತ್ತಿರುವುದಕ್ಕೆ ದಾಖಲೆಯ ಸಾಕ್ಷ್ಯಾಧಾರವನ್ನು ಎಲ್ಲರಿಗೂ ನೀಡಿದ್ದು, ಭಾರತದ ಗುಪ್ತಚರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ತಮಗೆ ತಿಳಿದಿದೆಯೆಂದು ಅವರು ವಾದಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಯೊಂದು ಭಯೋತ್ಪಾದಕ ಸಂಘಟನೆಗಳಲ್ಲಿ ಐಎಸ್‌ಐ ಮ‌ೂಗು ತೂರಿಸುತ್ತಿದೆಯೆಂಬ ಸಂಗತಿಯನ್ನು ಮುಷರಫ್ ಒಪ್ಪಿಕೊಂಡರು. ಆದರೆ ಐಎಸ್‌ಐ ತಾಲಿಬಾನ್ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆಯೆಂಬ ಅಮೆರಿಕ ನಾಯಕರ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ