ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್‌ನಲ್ಲಿ 'ಸ್ಪರ್ಮಿನೇಟರ್' ಬಲೆಗೆ ಬಿದ್ದ ಯುವತಿಯರು (Sperminator | Facebook | laptop | British)
Feedback Print Bookmark and Share
 
ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್ ಫೇಸ್‌ಬುಕ್‌ನಲ್ಲಿ ಯುವತಿಯರನ್ನು ಓಲೈಸುವ ಮ‌ೂಲಕ ಅವರ ಜತೆ ಸಂಪರ್ಕ ಹೊಂದಿ, ಸುಮಾರು 12 ಯುವತಿಯರನ್ನು ಗರ್ಭಿಣಿಯರನ್ನಾಗಿ ಮಾಡಿದ ಬ್ರಿಟನ್ ವ್ಯಕ್ತಿಯೊಬ್ಬನಿಗೆ 'ಸ್ಪರ್ಮಿನೇಟರ್' ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ವಂಚಕನ ಮೋಹಕ್ಕೆ ಸಿಕ್ಕಿದ ಐವರು ಮಹಿಳೆಯರು ಈಗ ಮಕ್ಕಳನ್ನು ಸಾಕುತ್ತಿದ್ದರೆ, ಇನ್ನೂ ಐವರು ಗರ್ಭಪಾತಕ್ಕೆ ಒಳಗಾಗಿದ್ದಾರೆ ಮತ್ತು ಇಬ್ಬರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಷ್ಟೇ ಅಲ್ಲದೇ, ಲ್ಯಾಪ್‌ಟಾಪ್ ಗೀಳಿನ ಬೇಟೆಗಾರ ಡಾಮಿನಿಕ್ ಬ್ಯಾರೊನೆಟ್ ಕರಾಳ ಇತಿಹಾಸವನ್ನೂ ಹೊಂದಿದ್ದು, ಕೊಕೇನ್ ಮತ್ತು ಎಕ್ಸ್‌ಟೆಸಿ ಪೂರೈಕೆ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾದ ಮಾದಕವಸ್ತು ಮಾರಾಟಗಾರನಾಗಿದ್ದಾನೆ.

ಅವನಿಂದ ವಂಚನೆಗೆ ಒಳಗಾದ ಕೆರಿ ಮಾರ್ಟಿನ್ ಎಂಬ 24ರ ಹರೆಯದ ಯುವತಿ ಬರೋನೆಟ್‌ನ ಪುಟದ ಮೇಲೆ ನಿಗಾವಹಿಸುವ ಮ‌ೂಲಕ ಅವನ ವಂಚನೆ ವಿಧಾನವನ್ನು ಪತ್ತೆಹಚ್ಚಿದಳು. ಅವನು ಕಳಿಸಿದ ಅಭಿನಂದನೆ ಸಂದೇಶದಲ್ಲಿ 24ರ ಪ್ರಾಯದ ಸ್ಟಾಸಿ ಜೋನ್ಸ್ ಅದೇ ಸಮಯದಲ್ಲಿ ಗರ್ಭಿಣಿಯಾಗಿದ್ದನ್ನು ಅವಳು ಪತ್ತೆಹಚ್ಚಿದಳು.

ಯುವತಿಯರು ಪರಸ್ಪರ ಸಂಧಿಸಿದಾಗ, ಒಂದೇ ದಿನ ರಾತ್ರಿ ಬೊರೊನೆಟ್ ಇಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿದ್ದ ವಿಷಯ ಬೆಳಕಿಗೆ ಬಂತು. ಯುವತಿಯರನ್ನು ಯಾವುದೇ ಪರಿಣಾಮದ ಬಗ್ಗೆ ಯೋಚಿಸದೇ ಗರ್ಭಿಣಿಯರನ್ನಾಗಿ ಮಾಡಿದ್ದರಿಂದ ಸ್ಪರ್ಮಿನೇಟರ್ ಎಂಬ ಹೆಸರಿಗೆ ಲಾಯಕ್ಕೆಂದು ಸ್ಟಾಸಿ ಜೋನ್ಸ್ ತಿಳಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ