ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿ ಕ್ರಿಮಿನಲ್, ವಂಚಕನೆಂದು ಜರಿದ ಮುಷರಫ್ (Zardari | Musharraf | Pakistan | President)
Feedback Print Bookmark and Share
 
ಪಾಕಿಸ್ತಾನದ ಮಾಜಿ ಜನರಲ್ ಮುಷರಫ್ ಅವರು ಪ್ರಸಕ್ತ ಅಧ್ಯಕ್ಷ ಜರ್ದಾರಿ ಅವರನ್ನು ಕ್ರಿಮಿನಲ್, ವಂಚಕ ಮತ್ತು ಮ‌ೂರನೇ ದರ್ಜೆಯವ ಎಂದು ಜರಿಯುವ ಮ‌ೂಲಕ ಅವರಿಬ್ಬರ ನಡುವಿನ ಸಂಬಂಧ ಹಳಸಿರುವುದು ಸಂದರ್ಶನವೊಂದರಲ್ಲಿ ಬೆಳಕಿಗೆ ಬಂದಿದೆ.

ಹೆಸರಾಂತ ಪತ್ರಕರ್ತ ಸೇಮರ್ ಹರ್ಷ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷರಫ್ ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಜರ್ದಾರಿ ಹೋಗುತ್ತಾರೆಂದು ಟೀಕಿಸಿದರು.ಪಾಕಿಸ್ತಾನ ಕುರಿತ ತನ್ನ ವಿವರವಾದ ವರದಿಯಲ್ಲಿ ಹರ್ಷ್, 'ಮುಷರಫ್ ತಮ್ಮ ಉತ್ತರಾಧಿಕಾರಿಯನ್ನು ಹಿಗ್ಗಾಮುಗ್ಗಾ ಜರಿದಿದ್ದಾಗಿ ತಿಳಿಸಿದ್ದಾರೆ.

ಜರ್ದಾರಿ ತಮ್ಮನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಅವರೊಬ್ಬ ದೇಶಭಕ್ತರಲ್ಲ ಮತ್ತು ಪಾಕಿಸ್ತಾನದ ಮೇಲೆ ಯಾವುದೇ ಪ್ರೀತಿಯಿಲ್ಲ. ಅವರೊಬ್ಬರು ಮ‌ೂರನೇ ದರ್ಜೆ ವ್ಯಕ್ತಿ' ಎಂದು ಹೇಳಿದ್ದಾರೆ.

ಮುಷರಫ್ ಮತ್ತು ಜನರಲ್ ಕಯಾನಿ ದೂರವಾಣಿ ಸಂಪರ್ಕದಲ್ಲಿದ್ದು, ಸೇನೆ ಕ್ಷಿಪ್ರಕ್ರಾಂತಿ ನಡೆಸುವಷ್ಟು ಸಮರ್ಥವಲ್ಲವೆಂದು ನುಡಿದಿದ್ದಾರೆ.ಸೇನೆಯಲ್ಲಿ ಕೆಲವು ಮ‌ೂಲಭೂತವಾದಿ ಕಲ್ಪನೆಯ ಜನರಿದ್ದಾರೆ. ಈ ಜನರು ಸಂಘಟಿತರಾಗಿ ದಂಗೆಯೇಳುವ ಸಾಧ್ಯತೆಯಿಲ್ಲವೆಂದು ಅವರು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ