ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಣ್ವಸ್ತ್ರ ವಶ ಯೋಜನೆ ಕೆಲ್ಲಿ ನಿರಾಕರಣೆ (Washington | Islamabad | United States | Kelly)
Feedback Print Bookmark and Share
 
ಪಾಕಿಸ್ತಾನದ ಅಣ್ವಸ್ತ್ರಗಳನ್ನು ವಶಪಡಿಸಿಕೊಳ್ಳುವ ಯೋಜನೆ ಹೊಂದಿರುವ ವರದಿಗಳನ್ನು ಅಮೆರಿಕ ಮಂಗಳವಾರ ನಿರಾಕರಿಸಿದ್ದು, ಪಾಕಿಸ್ತಾನದ ಪರಮಾಣು ಅಸ್ತ್ರಗಳಿಗೆ ಸೂಕ್ತ ಭದ್ರತೆ ಒದಗಿಸಲು ಇಸ್ಲಾಮಾಬಾದ್ ಸಾಮರ್ಥ್ಯ ಹೊಂದಿರುವ ಬಗ್ಗೆ ತಮಗೆ ವಿಶ್ವಾಸವಿದೆಯೆಂದು ಹೇಳಿದೆ.

ಅಮೆರಿಕಕ್ಕೆ ಪಾಕಿಸ್ತಾನದ ಅಣ್ವಸ್ತ್ರಗಳನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ವಿದೇಶಾಂಗ ಇಲಾಖೆ ವಕ್ತಾರ
ಐಯಾನ್ ಕೆಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನ ಪ್ರಮುಖ ಮಿತ್ರಪಕ್ಷವೆಂದು ಹೇಳಿದ ಕೆಲ್ಲಿ, ಪ್ರಾದೇಶಿಕ ಭದ್ರತೆ ಸಂಬಂಧಿಸಿದಂತೆ ಮುಖ್ಯ ವಿಷಯಗಳ ಬಗ್ಗೆ ನಾವು ಪಾಕಿಸ್ತಾನದ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಪಾಕಿಸ್ತಾನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಮತ್ತು ಸಾಮಗ್ರಿಗಳಿಗೆ ಸೂಕ್ತ ಭದ್ರತೆ ರೂಪಿಸುವ ಪಾಕಿಸ್ತಾನ ಸರ್ಕಾರದ ಸಾಮರ್ಥ್ಯದಲ್ಲಿ ನಮಗೆ ನಂಬಿಕೆಯಿದೆಯೆಂದು ಅವರು ತಿಳಿಸಿದರು. ಪಾಕಿಸ್ತಾನದಲ್ಲಿ ಸ್ಥಿರತೆ ಸಾಧನೆಗಾಗಿ ಬಂಡುಕೋರ ನಿಗ್ರಹ ಸಾಮರ್ಥ್ಯ ಬಲವರ್ಧನೆ ಮೇಲೆ ಕೇಂದ್ರೀಕರಿಸುವ ಭದ್ರತಾ ನೆರವು ಕ್ರಮಗಳನ್ನು ಕೈಗೊಳ್ಳುವುದಾಗಿ ಕೆಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ