ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೂಟರ್‌ಗೆ ಮರಳಿದ ಪ್ರಜ್ಞೆ: ಹತ್ಯೆ ಪ್ರೇರಣೆ ಬಹಿರಂಗ ನಿರೀಕ್ಷೆ (Fort Hood | military base | Nidal Hasan | Military)
Feedback Print Bookmark and Share
 
ಅಮೆರಿಕದ ಮಿಲಿಟರಿ ನೆಲೆಯಲ್ಲಿ 13 ಜನರನ್ನು ಗುಂಡಿಕ್ಕಿ ಕೊಂದ ಆರೋಪಿ ಶೂಟರ್‌ಗೆ ಪ್ರಜ್ಞೆ ಮರಳಿಬಂದಿದ್ದು, ಶೂಟ್‌ಔಟ್‌ಗೆ ಪ್ರೇರಣೆಯೇನು ಎಂದು ಬಹಿರಂಗವಾಗುವ ಆಶಾವಾದ ವ್ಯಕ್ತವಾಗಿದೆ. ಫೋರ್ಟ್ ಹುಡ್ ನೆಲೆಯಲ್ಲಿ ದಿನವಿಡೀ ತನಿಖೆಯಲ್ಲಿ ಗುರುವಾರದ ಶೂಟಿಂಗ್ ಕುರಿತು ಕಾರಣಗಳನ್ನು ಪತ್ತೆಹಚ್ಚಲು ವಿಫಲವಾಗಿತ್ತು.

ಅವನು ಮಾತನಾಡುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಜತೆ ಸಂಭಾಷಿಸುತ್ತಿದ್ದಾನೆಂದು ಸಾನ್ ಆಂಟೋನಿಯ ಬ್ರೂಕ್ ಸೇನಾ ವೈದ್ಯಕೀಯ ಕೇಂದ್ರದ ವಕ್ತಾರೆಯು ಸೇನೆಯ ಮನೋವೈದ್ಯ ಮೇಜರ್ ನಿಡಾಲ್ ಹಸನ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.

38 ವರ್ಷ ವಯಸ್ಸಿನ ಧರ್ಮಾಂಧ ಹಸನ್‌ನನ್ನು ಮಹಿಳಾ ಸಾರ್ಜೆಂಟ್ ಗುಂಡಿಕ್ಕಿ ಮಾರಕ ಗುಂಡಿನದಾಳಿಗೆ ಕಡಿವಾಣ ಹಾಕಿದ್ದರು.. ಗುಂಡೇಟಿನಿಂದ ಗಾಯಗೊಂಡು ಶನಿವಾರದವರೆಗೆ ಗಂಭೀರ ಸ್ಥಿತಿಯಲ್ಲಿ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದ್ದ ಹಸನ್ ಮಂಗಳವಾರ ಪ್ರಜ್ಞೆಯಿಂದ ಮರಳಿದ್ದಾನೆಂದು ತಿಳಿದುಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ