ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನನಿಲ್ದಾಣಕ್ಕೆ ದುರದೃಷ್ಟ: ಸೈತಾನರ ಸ್ಥಳಾಂತರ (Bangkok | Airport | Demon | Bad luck)
Feedback Print Bookmark and Share
 
ಬ್ಯಾಂಕಾಕ್ ಸುವರ್ಣಭೂಮಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಆಗಮನ ಸ್ಥಳದಿಂದ 12 ಆರು ಮೀಟರ್ ಉದ್ದದ ಸೈತಾನ ಪ್ರತಿಮೆಗಳನ್ನು ನಿಲ್ದಾಣವು ದುರದೃಷ್ಟಗಳ ಸುಳಿಗೆ ಸಿಕ್ಕಿದ ಪರಿಣಾಮವಾಗಿ ಚೆಕ್ ಇನ್ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಪ್ರತಿಯೊಂದು ಸೈತಾನ ಪ್ರತಿಮೆಗಳು ತಲಾ ಒಂದು ಟನ್ ತೂಕವಿದ್ದು, ಒಟ್ಟು 8,90,000 ಡಾಲರ್ ಮೌಲ್ಯವುಳ್ಳದ್ದಾಗಿದೆ.

ಪ್ರತಿಮೆಯ ಸ್ಥಳಾಂತರಕ್ಕೆ ವಿಮಾನನಿಲ್ದಾಣದ ಸಿಬ್ಬಂದಿ ಧಾರ್ಮಿಕ ವಿಧಿಯನ್ನು ಮುಗಿಸಿದ ಬಳಿಕ ಪ್ರತಿಮೆಗಳನ್ನು ಸ್ಥಳಾಂತರಿಸಲಾಯಿತು.ಸೆಪ್ಟೆಂಬರ್ 2006ರಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿದಾಗಿನಿಂದರೂ ವಿಮಾನನಿಲ್ದಾಣ ದುರಾದೃಷ್ಟದ ಸುಳಿಯಲ್ಲಿ ಸಿಲುಕಿದ್ದರಿಂದ ಪ್ರತಿಮೆಗಳು ಸ್ಥಾಪಿಸಿರುವ ಸ್ಥಳವೇ ಇದಕ್ಕೆ ಕಾರಣವಿರಬಹುದೆಂದು ವಿಮಾನನಿಲ್ದಾಣದ ಸಿಬ್ಬಂದಿ ಮತ್ತು ಅಂಗಡಿ ಮಾಲೀಕರು ದೂರಿದ್ದರು.

ಮಾಜಿ ಪ್ರಧಾನಮಂತ್ರಿ ತಾಕ್ಸಿನ್ ಶಿನಾವತ್ರಾ ಅವರನ್ನು ಮಿಲಿಟರಿ ದಂಗೆಯ ಬಳಿಕ ಉರುಳಿಸಿದ ಕೆಲವೇ ವಾರಗಳಲ್ಲಿ ವಿಮಾನನಿಲ್ದಾಣ ಅನಾವರಣಗೊಂಡಿತು. ವಿಮಾನನಿಲ್ದಾಣ ನಿರ್ಮಾಣ ಹಂತದಲ್ಲಿ ಭ್ರಷ್ಟಾಚಾರದ ಕೂಗು ಕೇಳಿಬಂದು, ಟ್ಯಾಕ್ಸಿವೇಗಳಲ್ಲಿ ಕೆಲವೇ ತಿಂಗಳುಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸರ್ಕಾರಿ ವಿರೋಧಿ ಪ್ರತಿಭಟನೆಕಾರರು ಒಂದು ವಾರದವರೆಗೆ ವಿಮಾನನಿಲ್ದಾಣವನ್ನು ಮುಚ್ಚಿದ್ದರಿಂದ ಥಾಯ್ಲೆಂಡ್‌ಗೆ ಪ್ರವಾಸೋದ್ಯಮ ಸ್ಥಗಿತ ಮತ್ತು ರಫ್ತು ಆದಾಯದಲ್ಲಿ ಕುಸಿತದಿಂದ ಕೋಟ್ಯಂತರ ಡಾಲರ್ ನಷ್ಟ ಉಂಟಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ