ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನ್: ಪಡೆಗಳ ಹೆಚ್ಚಳಕ್ಕೆ ಒಬಾಮಾ ಒಪ್ಪಿಗೆ ಸಂಭವ (Obama | Taliban | AAfghan | McChrystal)
Feedback Print Bookmark and Share
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಾವಿರಾರು ಹೆಚ್ಚುವರಿ ಯೋಧರನ್ನು ಕಳಿಸುವ ಯೋಜನೆಗೆ ಒಪ್ಪಿಗೆ ನೀಡಲಿದ್ದಾರೆಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಜನರಲ್ ಸ್ಟಾನ್ಲಿ ಮೆಕ್ರಿಸ್ಟಲ್ ಕೋರಿಕೆಯಂತೆ 40,000 ಹೆಚ್ಚುವರಿ ಸೈನಿಕರನ್ನು ಆಫ್ಘಾನಿಸ್ತಾನಕ್ಕೆ ಕಳಿಸಲು ಒಬಾಮಾ ಅನುಮೋದನೆ ನೀಡಲಿದ್ದಾರೆ.

ಒಬಾಮಾ ಆಫ್ಘಾನಿಸ್ತಾನಕ್ಕೆ ಹೊಸ ಕಾರ್ಯತಂತ್ರವನ್ನು ರೂಪಿಸಲು ತಮ್ಮ ಉನ್ನತ ಸಲಹೆಗಾರರ ಜತೆ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಫ್ಘಾನಿಸ್ತಾನದಲ್ಲಿ ಭದ್ರತಾ ವಾತಾವರಣ ಹದಗೆಟ್ಟಿದ್ದು, ಅಮೆರಿಕದ ಪಡೆಗಳ ಸಾವುನೋವು ಹೆಚ್ಚಿದ್ದರಿಂದ ಇರಾಕಿ ಶೈಲಿಯಲ್ಲಿ ಪಡೆಗಳ ಹೆಚ್ಚಳಕ್ಕೆ ಬೆಂಬಲಿಸಲಾಗಿತ್ತು.

ಪಡೆಗಳ ಸಂಖ್ಯೆಯನ್ನು ಹೆಚ್ಚಿಸುವ ಒಬಾಮಾ ನಿರ್ಧಾರವು ಮೆಕ್ರಿಸ್ಟಾಲ್ ಕೋರಿದ ಪಡೆಗಳ ಸಂಖ್ಯೆಗೆ ಸಮೀಪದಲ್ಲಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ