ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನ್‌ನಲ್ಲಿ ಭ್ರಷ್ಟಾಚಾರ ನಿರ್ಮ‌ೂಲನೆಗೆ ಕ್ಲಿಂಟನ್ ಕರೆ (Clinton | Karzai | Corruption | Germany)
Feedback Print Bookmark and Share
 
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಆಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಅವರಿಗೆ ಸೋಮವಾರ ಕರೆ ಮಾಡಿ ಆಫ್ಘಾನಿಸ್ತಾನದಲ್ಲಿ ಭ್ರಷ್ಟಾಚಾರವನ್ನು ಮ‌ೂಲೋತ್ಪಾಟನೆ ಮಾಡುವಂತೆ ತಿಳಿಸಿದ್ದು, ಭ್ರಷ್ಟಾಚಾರ ನಿರ್ಮ‌ೂಲನೆಗೆ ಉತ್ತರದಾಯಿ ಆಗಿರಲು ಕೆಲವು ಕ್ರಮಗಳ ಕಂತೆಯನ್ನು ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಸ್ಥಿರತೆ ನೆಲೆಸಲು ಅಮೆರಿಕ, ಜರ್ಮನಿ ಮತ್ತಿತರ ಮಿತ್ರರಾಷ್ಟ್ರಗಳ ಬದ್ಥತೆಗೆ ನೂತನ ಕರ್ಜೈ ಸರ್ಕಾರ ಭ್ರಷ್ಟಾಚಾರ ನಿರ್ಮ‌ೂಲನೆ ಮಾಡುವ ಯತ್ನದಲ್ಲಿ ಇನ್ನಷ್ಟು ಬದ್ಥತೆ ತೋರಿಸಬೇಕೆಂದು ಅವರು ಹೇಳಿದ್ದಾರೆ.

ನಾವು ಆಫ್ಘಾನಿಸ್ತಾನ ಸರ್ಕಾರಕ್ಕೆ, ಅಧ್ಯಕ್ಷ ಕರ್ಜಾಯ್‌ಗೆ ನಿರೀಕ್ಷೆಗಳು ಮತ್ತು ಉತ್ತರದಾಯಿ ಕ್ರಮಗಳನ್ನು ಹಸ್ತಾಂತರಿಸುತ್ತೇವೆಂದು ಅವರು ವಿವರಿಸಿದ್ದಾರೆ. ಕ್ಲಿಂಟನ್ ಅವರು ಬರ್ಲಿನ್ ಗೋಡೆ ಪತನದ 20ನೇ ವಾರ್ಷಿಕೋತ್ಸವದ ಆಚರಣೆ ಸಲುವಾಗಿ ಬರ್ಲಿನ್‌ನಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ