ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 10 ಜನರನ್ನು ಕೊಂದ ಹಂತಕನಿಗೆ ಮಾರಕ ಚುಚ್ಚುಮದ್ದು (Muhammad | Washington | Execution | Death)
Feedback Print Bookmark and Share
 
ಅಮೆರಿಕದ ರಾಜಧಾನಿಯಲ್ಲಿ ಶೂಟಿಂಗ್ ದಾಂಧಲೆ ಮ‌ೂಲಕ 10 ಜನರನ್ನು ಹತ್ಯೆ ಮಾಡಿದ ವಾಷಿಂಗ್ಟನ್ನಿನ ಹಂತಕ ಜಾನ್ ಅಲೆನ್ ಮುಹಮ್ಮದ್‌ನನ್ನು ಮಂಗಳವಾರ ಮರಣದಂಡನೆಗೆ ಗುರಿಪಡಿಸಲಾಯಿತು.. ಮರಣದಂಡನೆ ಶಿಕ್ಷೆಗೆ ತಡೆಯಾಜ್ಞೆ ಕೋರಿ ಮುಹಮದ್ ವಕೀಲರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ವಜಾಗೊಂಡ ಬಳಿಕ ಅವನ ಮರಣದಂಡನೆ ದಿನಾಂಕ ನಿಗದಿಪಡಿಸಲಾಯಿತು.

ಮುಹಮದ್‌ನಿಗೆ ಮಾರಕ ಚುಚ್ಚುಮದ್ದು ನೀಡಿ ವಿರ್ಜಿನಿಯದಲ್ಲಿ ಬೆಳಿಗ್ಗೆ 9 ಗಂಟೆಗೆ ಮರಣದಂಡನೆ ವಿಧಿಸಲಾಯಿತು..2002ರಲ್ಲಿ ಸಂಭವಿಸಿದ ಸರಣಿ ಹತ್ಯೆಗಳ ಪ್ರಕರಣದಲ್ಲಿ ವಾಷಿಂಗ್‌ಟನ್ ಪ್ರದೇಶವನ್ನು ಭಯದ ಸುಳಿಯಲ್ಲಿ ಸಿಲುಕಿಸಿದ ಮಹಮದ್, ಶಾಪಿಂಗ್ ಮಾಲ್‌ಗಳಲ್ಲಿ, ಶಾಲೆಗಳ ಹೊರಗೆ ಮತ್ತು ಅನಿಲ ನಿಲ್ದಾಣಗಳಲ್ಲಿ ತನ್ನ ಬಲಿಪಶುಗಳನ್ನು ಆಯ್ಕೆಮಾಡುತ್ತಿದ್ದ.

ಅಧಿಕಬಲದ ಬಂದೂಕು ಮತ್ತು ಸ್ಕೋಪ್ ನೆರವಿನಿಂದ 3 ವಾರಗಳವರೆಗೆ ಭಯದ ವಾತಾವರಣ ಮ‌ೂಡಿಸಿ, ತನ್ನ ಪ್ರತಿಯೊಬ್ಬ ಬಲಿಪಶುವನ್ನು ದೂರದಿಂದ ಹಾರಿಸಿದ ಏಕೈಕ ಗುಂಡಿನಿಂದ ಬಲಿತೆಗೆದುಕೊಂಡಿದ್ದ. ಫೆಡರಲ್ ಮತ್ತು ಸ್ಥಳೀಯ ಪೊಲೀಸರ ಭೇಟೆಯ ಬಳಿಕ ಅವನನ್ನು ಪತ್ತೆಹಚ್ಚಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ