ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಚಾರ್‌ಸಾಡ್ಡಾದಲ್ಲಿ ಸ್ಫೋಟಕ್ಕೆ 10 ಬಲಿ (Pakistan | Charsadda | Bomb | Blast)
Feedback Print Bookmark and Share
 
ಪಾಕಿಸ್ತಾನದ ವಾಯವ್ಯ ಚಾರ್‌ಸಡ್ಡಾ ಪ್ರದೇಶದ ಜನದಟ್ಟಣೆಯ ರಸ್ತೆಗಳ ಕೂಡುಸ್ಥಳದಲ್ಲಿ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 10 ಜನರು ಬಲಿಯಾಗಿದ್ದಾರೆ. ಸ್ಫೋಟದಲ್ಲಿ ಸುಮಾರು 7 ಜನರು ಕೂಡ ಗಾಯಗೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೊಹಮದ್ ರಿಯಾಜ್ ತಿಳಿಸಿದ್ದಾರೆ.

ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ರಾಜಧಾನಿ ಪೇಶಾವರಕ್ಕೆ ಹತ್ತಿರದಲ್ಲಿ ಇದು ಸಂಭವಿಸಿದ ಮ‌ೂರನೇ ಸ್ಫೋಟವಾಗಿದೆ. ಮಂಗಳವಾರದ ಸ್ಫೋಟದಿಂದ ಭಯಭೀತ ವಾತಾವರಣ ಉಂಟಾಗಿದ್ದು, ಗಾಳಿಯಲ್ಲಿ ದಟ್ಟವಾದ ದೂಳಿನ ಹೊಗೆ ಮುಸುಕಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಉಗ್ರಗಾಮಿಗಳ ವಿರುದ್ಧ ಪಾಕ್ ಸೇನೆ ಕಾರ್ಯಾಚರಣೆ ಆರಂಭಿಸಿದ ನಂತರ ತಾಲಿಬಾನಿಗಳು ಮೇಲಿಂದ ಮೇಲೆ ಸ್ಫೋಟಗಳಿಂದ ರಕ್ತಪಾತ ಹರಿಸುವ ಮ‌ೂಲಕ ಆತಂಕದ ಅಲೆ ಸೃಷ್ಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ