ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯನ ಹತ್ಯೆ: ಬ್ರಿಟನ್ ಪೌರನಿಗೆ 18 ವರ್ಷ ಜೈಲು (Briton | Glasgow | Mohanty | London)
Feedback Print Bookmark and Share
 
ಭಾರತದ ನೌಕಾಧಿಕಾರಿ ಕುನಾಲ್ ಮೊಹಾಂತಿ ಎಂಬವರನ್ನು ಇರಿದುಕೊಂದ ಬ್ರಿಟನ್‌ ಪೌರನನ್ನು ಲಂಡನ್ ಕೋರ್ಟೊಂದು 18 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. 30ರ ಪ್ರಾಯದ ಮೊಹಾಂತಿ ಕಳೆದ ಮಾರ್ಚ್‌ನಲ್ಲಿ ತನ್ನ ಸ್ನೇಹಿತರ ಜತೆ ಗ್ಲಾಸ್ಗೊನಲ್ಲಿ ರೆಸ್ಟೊರೆಂಟ್‌ಗೆ ತೆರಳುತ್ತಿದ್ದಾಗ 25 ವರ್ಷ ವಯಸ್ಸಿನ ಕ್ರಿಸ್ಟೋಫರ್ ಮಿಲ್ಲರ್ ಚೂರಿಯಿಂದ ಕುತ್ತಿಗೆಗೆ ಇರಿದಿದ್ದರಿಂದ ಮೊಹಾಂತಿ ಅಸುನೀಗಿದ್ದರು.

ಮೊಹಾಂತಿ ಹತ್ಯೆಯನ್ನು ಜನಾಂಗೀಯ ದ್ವೇಷದ ದಾಳಿ ಮತ್ತು ದುಷ್ಟಕೃತ್ಯವೆಂದು ಹೈಕೋರ್ಟ್ ನ್ಯಾಯಾಧೀಶರು ಪರಿಗಣಿಸಿದರು. ಗ್ಲಾಸ್ಗೊನಲ್ಲಿ ನಡೆದ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ನೌಕಾಧಿಕಾರಿ ಮೇಲೆ ವರ್ಣಭೇದದ ದಾಳಿ ಮಾಡಲಾಗಿದೆಯೆಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಮೊಹಾಂತಿ ಮಗುವಿನ ತಂದೆಯಾಗುವ ನಿರೀಕ್ಷೆಯಲ್ಲಿದ್ದು, ನಗರದ ನಾಟಿಕಲ್ ಕಾಲೇಜಿನಲ್ಲಿ ಕ್ಯಾಪ್ಟನ್ ಪರೀಕ್ಷೆಗೆ ಕುಳಿತುಕೊಳ್ಳಲು ಗ್ಲಾಸ್ಗೊಗೆ ಬಂದಿದ್ದಾಗಲೇ ಈ ದಾಳಿ ನಡೆಸಲಾಗಿತ್ತು. ಮೊಹಾಂತಿ ಕುತ್ತಿಗೆಯಲ್ಲಿ ಸುಮಾರು 18 ಸೆಮೀ ರಂಧ್ರ ಉಂಟಾದ ಬಳಿಕ ತೀವ್ರ ರಕ್ತಸ್ರಾವದಿಂದ ಅವರು ಸತ್ತರು. ತಾನು ಕಂಡ ಅತ್ಯಂತ ಭೀಕರ ಗಾಯಗಳಲ್ಲೊಂದು ಎಂದು ಮೊಹಾಂತಿ ಕುತ್ತಿಗೆಯ ಗಾಯವನ್ನು ಕಂಡು ವೈದ್ಯರೊಬ್ಬರು ಆಘಾತ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ