ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜುಲೈ 18 'ನೆಲ್ಸನ್ ಮಂಡೇಲಾ ದಿನ': ವಿಶ್ವಸಂಸ್ಥೆ (Nelson Mandela | UN | July 18 | New York)
Feedback Print Bookmark and Share
 
ದಕ್ಷಿಣ ಆಫ್ರಿಕಾದ ವರ್ಣದ್ವೇಷಿ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೀಡಿದ ಕೊಡುಗೆಗಾಗಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಜುಲೈ 18ನ್ನು 'ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ'ವೆಂದು ಘೋಷಿಸಿದೆ.

ಮಂಡೇಲಾ ಹುಟ್ಟುಹಬ್ಬವಾದ ಜುಲೈ 18ರಂದು ಪ್ರತಿವರ್ಷ ಅವರ ಸ್ಮಾರಕೋತ್ಸವಗಳನ್ನು ಹಮ್ಮಿಕೊಳ್ಳಬೇಕೆಂದು ಒಮ್ಮತದಿಂದ 192 ಸದಸ್ಯರು ಅಂಗೀಕರಿಸಿದ ನಿರ್ಣಯದಲ್ಲಿ ವಿಶ್ವಸಂಸ್ಥೆ ಕರೆ ನೀಡಿದೆ.ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಂಡೇಲಾ ಅವರು ಸಂಘರ್ಷಗಳ ಇತ್ಯರ್ಥಕ್ಕೆ, ವಿವಿಧ ಜನಾಂಗೀಯ ಸಂಬಂಧಕ್ಕೆ ಉತ್ತೇಜನ ಮತ್ತು ಮಾನವ ಹಕ್ಕುಗಳು ಮತ್ತು ಸಂಧಾನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಸ್ಮರಣೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.

ನಿರ್ಣಯವನ್ನು ಅಂಗೀಕರಿಸುವ ಮ‌ೂಲಕ, ಅಂತಾರಾಷ್ಟ್ರೀಯ ಸಮುದಾಯವು ಜನರ ಒಳಿತಿಗಾಗಿ ಕಷ್ಟಪಟ್ಟ ಮಹಾನ್ ವ್ಯಕ್ತಿಗೆ ತನ್ನ ಮೆಚ್ಚುಗೆಯನ್ನು ಸೂಚಿಸಿದೆ ಎಂದು ಜನರಲ್ ಅಸೆಂಬ್ಲಿ ಅಧ್ಯಕ್ಷ ಅಲಿ ಟ್ರೆಕಿ ತಿಳಿಸಿದ್ದಾರೆ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮುಖ್ಯಸ್ಥರಾಗಿ 91ರ ಪ್ರಾಯದ ಮಂಡೇಲಾ ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷದ ವಿರುದ್ಧ ಹೋರಾಟದ ನೇತೃತ್ವ ವಹಿಸಿದ್ದರು.

ಅವರ ವಿರುದ್ಧ ವಿಧ್ವಂಸಕಾರಿ ಚಟುವಟಿಕೆ ಮತ್ತಿತರ ಅಪರಾಧಗಳನ್ನು ಹೊರಿಸಿ 27 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 1990ರಲ್ಲಿ ಅವರ ಬಿಡುಗಡೆಯಾದಾಗ, ಅವರು ಹೊಂದಾಣಿಕೆಗೆ ಬೆಂಬಲಿಸಿ, ದಕ್ಷಿಣ ಆಫ್ರಿಕಾವನ್ನು ಬಹುಜನಾಂಗೀಯ ಪ್ರಜಾಪ್ರಭುತ್ವದತ್ತ ಪರಿವರ್ತನೆಗೆ ತಂದರು.
ಸಂಬಂಧಿತ ಮಾಹಿತಿ ಹುಡುಕಿ