ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಕೆ-47 ವಿನ್ಯಾಸಕ ಕಲಾಶ್ನಿಕೋವ್‌ಗೆ 90ರ ಹುಟ್ಟುಹಬ್ಬ (AK-47 | Kalashnikov | Russia | Kremlin)
Feedback Print Bookmark and Share
 
ಎಕೆ-47 ಪ್ರಹಾರದ ಬಂದೂಕಿನ ರಷ್ಯಾ ವಿನ್ಯಾಸಕ ಮೈಕೇಲ್ ಕಲಾಶ್ನಿಕೋವ್ ಅವರ 90ನೇ ಜನ್ಮದಿನದ ಸಮಾರಂಭದಲ್ಲಿ ಕ್ರೆಮ್ಲಿನ್‌ನಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಕಲಾಶ್ನಿಕೋವ್ ಸಂಶೋಧನೆಯು ಕಳೆದ 60 ವರ್ಷಗಳಲ್ಲಿ ಅಸಂಖ್ಯಾತ ಜನರ ಸಾವಿಗೆ ಕಾರಣವಾಗಿದ್ದರೂ, ಅವರನ್ನು ರಷ್ಯಾದಲ್ಲಿ ರಾಷ್ಟ್ರೀಯ ಆಸ್ತಿಯೆಂದು ಪರಿಗಣಿಸಲಾಗಿದೆ.

ರಾಷ್ಟ್ರದ ಅಧ್ಯಕ್ಷರು ಕಲಾಶ್ನಿಕೋವ್ ಅವರ 90ನೇ ಜನ್ಮದಿನದ ಅಂಗವಾಗಿ ಹೀರೊ ಆಫ್ ರಷ್ಯಾ ಪ್ರಶಸ್ತಿ ನೀಡಿ ಗೌರವಿಸಿದರು. 'ನೀವು ಸೃಷ್ಟಿಸಿದ ಕಲಾಶ್ನಿಕೋವ್ ಬಂದೂಕು ರಾಷ್ಟ್ರೀಯ ಬ್ರಾಂಡ್ ಆಗಿದ್ದು, ಪ್ರತಿಯೊಬ್ಬ ರಷ್ಯನ್ನನಲ್ಲಿ ಹೆಮ್ಮೆ, ಇತಿಹಾಸದಲ್ಲಿ ಭಾಗಿಯಾದ ಭಾವನೆ ಮ‌ೂಡಿ, ಭವಿಷ್ಯಕ್ಕಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತವಾಗುತ್ತದೆಂದು' ಅಧ್ಯಕ್ಷ ಮೆಡ್ವೆಡೆವ್ ತಿಳಿಸಿದ್ದಾರೆ.

ಕಲಾಶ್ನಿಕೋವ್ ಸೈಬೀರಿಯದ ಗ್ರಾಮವೊಂದರಲ್ಲಿ ಜನಿಸಿದ್ದು, ಅವರ ತಾಯಿಗೆ ಹುಟ್ಟಿದ 19 ಮಕ್ಕಳಲ್ಲಿ ಕೇವಲ 8 ಮಂದಿ ಮಾತ್ರ ಬದುಕುಳಿದರು. ಸೋವಿಯತ್ ಸೇನೆಯಲ್ಲಿ ಟ್ಯಾಂಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವರು ತಮ್ಮ ತೋಪಿನಿಂದ ಹಾರಿಸಿದ ಗುಂಡುಗಳಿಗೆ ಪ್ರತಿಅಸ್ತ್ರವೊಂದನ್ನು ಮೊದಲಿಗೆ ಸಂಶೋಧಿಸಿದರು. ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ಬಳಿಕ ಆಸ್ಪತ್ರೆಯ ಹಾಸಿಗೆಯಲ್ಲಿರುವಾಗಲೇ ಸಬ್ ಮೆಷಿನ್ ಗನ್ ತಯಾರಿಸಿದರು.

ಯಾವುದಾದರೂ ಸರಳ ವಸ್ತು ತಯಾರಿಸುವುದು ಜಟಿಲ ವಸ್ತು ತಯಾರಿಸುವುದಕ್ಕಿಂತ ಕಷ್ಟ. ಆದರೆ ಸೈನಿಕರು ವಿದ್ಯಾವಂತರಲ್ಲದಿಂದ ಬಳಸಲು ಸುಲಭವಾದ ಆಯುಧವನ್ನು ತಾವು ತಯಾರಿಸಬೇಕಾಯಿತೆಂದು ಕಲಾಶ್ನಿಕೋವ್ ಹೇಳಿದ್ದಾರೆ. 1949ರಲ್ಲಿ ಸೋವಿಯಟ್ ಸೇನೆ ಕಲಾಶ್ನಿಕೋವ್ ರೈಫಲ್ ಅಳವಡಿಸಿಕೊಂಡಿತು. ಮುಂದಿನ 60 ವರ್ಷಗಳಲ್ಲಿ ಬಂದೂಕಿನ ಅನೇಕ ವೈವಿಧ್ಯಗಳನ್ನು ತಯಾರಿಸಿದರು.

ಇಜೆವ್‌ಸ್ಕ್ ಐತಿಹಾಸಿಕ ನಗರದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡಿದರು.ಈ ಘಟಕದಲ್ಲಿ ಎಕೆ-47 ಬಂದೂಕುಗಳನ್ನು ಸಾಮ‌ೂಹಿಕವಾಗಿ ತಯಾರಿಸಲಾಯಿತು. ಕಲಾಶ್ನಿಕೋವ್ ಸಂಶೋಧನೆಯಿಂದ ಎಷ್ಟು ಒಳಿತಾಗಿದೆಯೆಂದು ಜನರು ಪ್ರಶ್ನಿಸಬಹುದು.ಆದರೆ ಜಗತ್ತಿನಾದ್ಯಂತ ಎಕೆ-47 ಪರಿಣಾಮಗಳನ್ನು ಕುರಿತು ಯಾರೂ ಪ್ರಶ್ನಿಸಲಾರರು.
ಸಂಬಂಧಿತ ಮಾಹಿತಿ ಹುಡುಕಿ