ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲೆ ಮೇಲೆ ದೋಷಾರೋಪಕ್ಕೆ 60 ದಿನ ಗಡುವು (US Court | Chicago | FBI | Lashkar)
Feedback Print Bookmark and Share
 
ಪಾಕಿಸ್ತಾನ ಮ‌ೂಲದ ಲಷ್ಕರೆ ತೊಯ್ಬಾ ಭಯೋತ್ಪಾದಕ ಸಂಘಟನೆಯು ಭಾರತ ಮತ್ತು ಡೆನ್ಮಾರ್ಕ್‌ನಲ್ಲಿ ರೂಪಿಸಿದ ಭಯೋತ್ಪಾದಕ ಸಂಚಿನ ಬಗ್ಗೆ ತನಿಖೆಗಳನ್ನು ಪೂರ್ಣಗೊಳಿಸಿ ದೋಷಾರೋಪ ಹೊರಿಸಲು ಚಿಕಾಗೊ ಕೋರ್ಟೊಂದು ಎಫ್‌ಬಿಐಗೆ 60 ದಿನಗಳ ಗಡುವನ್ನು ನೀಡಿದೆ.

ಮುಖ್ಯನ್ಯಾಯಾಧೀಶ ಜೇಮ್ಸ್ ಎಫ್ ಹೋಲ್ಡರ್‌ಮ್ಯಾನ್ ಅವರು ಲಷ್ಕರೆ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತರಾದ ಅಮೆರಿಕದ ಪೌರ ಡೇವಿಡ್ ಕೋಲ್ಮನ್ ಹೆಡ್ಲೆ ಜತೆ ಪಾಕಿಸ್ತಾನ ಮ‌‌ೂಲದ ಕೆನಡಾ ಪ್ರಜೆ ತಹಾವುರ್ ಹುಸೇನ್ ರಾನಾ ವಿರುದ್ಧ ದೋಷಾರೋಪ ಹೊರಿಸುವುದಕ್ಕೆ ಗಡುವನ್ನು 2010ರ ಜ.1ರವರೆಗೆ ವಿಸ್ತರಿಸಿದರು.

ಲಷ್ಕರೆ ತೊಯ್ಬಾ ಆದೇಶದ ಮೇಲೆ ಭಾರತದ ಮೇಲೆ ಭಯೋತ್ಪಾದನೆ ದಾಳಿಗೆ ಸಂಚು ರೂಪಿಸಿದ ಆರೋಪವನ್ನು ಹೆಡ್ಲೆ ಮೇಲೆ ಮೇಲೆ ಎಫ್‌ಬಿಐ ಹೊರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ