ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಸೇರಿ ನಾಲ್ಕು ವಿದ್ಯಾರ್ಥಿಗಳ ಮೇಲೆ ಹಲ್ಲೆ (South Asians | London | Indian | Muslim)
Feedback Print Bookmark and Share
 
6 ಮಂದಿ ಭಾರತೀಯ ಮ‌ೂಲದ ಯುವಕರು ಸೇರಿದಂತೆ ಬಿಳಿಯ ಮತ್ತು ಕಪ್ಪುವರ್ಣದ ಯುವಕರ ಗುಂಪೊಂದು ಏಷ್ಯನ್ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರಿಂದ ನಾಲ್ವರಿಗೆ ಇರಿತದ ಗಾಯಗಳಾಗಿದೆ. ಉತ್ತರ ಲಂಡನ್‌ನ ಪ್ರತಿಷ್ಠಿತ ಸಿಟಿ ಯ‌ೂನಿವರ್ಸಿಟಿ ಬಳಿ ಈ ಘಟನೆ ನಡೆದಿದೆಯೆಂದು ಪೊಲೀಸ್ ಮತ್ತು ವಿದ್ಯಾರ್ಥಿ ಗುಂಪುಗಳು ತಿಳಿಸಿವೆ.

ಸುಮಾರು 30 ಜನರಿದ್ದ ಚೂರಿಗಳು, ಲೋಹದ ಸರಳುಗಳು, ಇಟ್ಟಿಗೆಗಳು ಮತ್ತು ಕೋಲುಗಳನ್ನೇ ಅಸ್ತ್ರವಾಗಿ ಮಾಡಿಕೊಂಡಿದ್ದ ಗುಂಪಿನಲ್ಲಿ ಮ‌ೂವರು ವಿದ್ಯಾರ್ಥಿಗಳು ಮತ್ತು ದಾರಿಹೋಕರು ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದಾಗ ಮುಖ ಮತ್ತು ತಲೆಗಳಿಗೆ ಗಾಯಗಳಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪುಗಳಿಂದ ಹಲ್ಲೆಗೊಳಗಾದವರು ಭಾರತೀಯ ಮ‌ೂಲದ 6 ವಿದ್ಯಾರ್ಥಿಗಳೂ ಸೇರಿದ್ದಾರೆಂದು ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. ಚೂರಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿಗಳು ಸೇರಿದಂತೆ, ಹಿಂಸಾಚಾರದಲ್ಲಿ ಇನ್ನೂ ಇಬ್ಬರನ್ನು ಥಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ