ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಂಬಿಎಗೆ ಕಷ್ಟ, ಪ್ಲಂಬಿಂಗ್, ಬಡಗಿಗಳಿಗೆ ಶುಭಕಾಲ (MBA | Plumbing | Carpentry | Australia)
Feedback Print Bookmark and Share
 
ಆಸ್ಟ್ರೇಲಿಯದ ಶಿಕ್ಷಣಸಂಸ್ಥೆಗಳಲ್ಲಿ ಎಂಬಿಎ ಅಥವಾ ಸೌಂದರ್ಯ ಕೋರ್ಸ್‌ಗಳು ಭಾರತೀಯರಿಗೆ ಕನಸಿನ ಉದ್ಯೋಗ ತಂದುಕೊಡುತ್ತದೆಂಬ ದಿನಗಳು ಮುಗಿದಿವೆ. ಈಗ ತಾಂತ್ರಿಕ ವೃತ್ತಿಗಳಾದ ಪ್ಲಂಬಿಕ್, ಮರಗೆಲಸ ಅಥವಾ ಗಾರೆಕೆಲಸದ ಉದ್ಯೋಗಗಳು ಖಾಯಂ ವಾಸ್ತವ್ಯದ ಅರ್ಹತೆಯನ್ನು ಭಾರತೀಯರಿಗೆ ಸಂಪಾದಿಸಿ ಕೊಡುತ್ತದೆ.

ಎಂಬಿಎ ಕೋರ್ಸ್ ಓದಿದ ವಿದ್ಯಾರ್ಥಿ ಆಸ್ಟ್ರೇಲಿಯದಲ್ಲಿ ಪಿಆರ್ ಕೆಲಸಕ್ಕೆ ಸೇರಲು ಹೆಣಗಬೇಕಾಗುತ್ತದೆ.ಆದರೆ ವರ್ಣಚಿತ್ರ, ಮರಗೆಲಸ, ಗಾರೆಕೆಲಸ, ಪ್ಲಂಬಿಂಗ್ ಮತ್ತು ಎಲೆಕ್ಟ್ರಿಷಿಯನ್ ಕ್ಷೇತ್ರಗಳ ತಾಂತ್ರಿಕ ಅರ್ಹತೆ ಪಡೆದ ಮಾನವಶಕ್ತಿಯ ಅಪಾರ ಕೊರತೆಯನ್ನು ಆಸ್ಟ್ರೇಲಿಯ ಎದುರಿಸುತ್ತಿದ್ದು, 2 ವರ್ಷಗಳ ಕೋರ್ಸ್ ಮುಗಿದ ಬಳಿಕ ಧಾರಾಳ ಮಾಸಿಕ ಆದಾಯ ಸಿಗುತ್ತದೆಂದು ಮೆಲ್ಬೋರ್ನ್ ಮ‌ೂಲದ ಬಿಸಿನೆಸ್ ಲಿಂಕ್ಸ್ ನಿರ್ದೇಶಕ ಸಜನ್ ಜಾನ್ ತಿಳಿಸಿದ್ದಾರೆ.

ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳಿಗೆ ಅಪಾರ ಮಾಧ್ಯಮ ಪ್ರಚಾರ ಸಿಕ್ಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವೀಸಾ ಪಡೆಯಲು ಕಾಯುವ ಅವಧಿಯನ್ನು ಒಂದು ತಿಂಗಳಿಂದ ಎರಡು ತಿಂಗಳಿಗೆ ಹೆಚ್ಚಿಸಲಾಗಿದೆ. ಭಾರತದ ಆಸ್ಟ್ರೇಲಿಯ ಎಂಬಸಿಯಲ್ಲಿ ವಿದ್ಯಾರ್ಥಿ ವೀಸಾ ನೀಡುವ ಮುನ್ನ, ಸಂದರ್ಶನದಲ್ಲಿ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ