ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಿಂದ ಪಾಕಿಸ್ತಾನ ಸಮರವಿಮಾನ ಖರೀದಿ (Pakistan | China | Aircraft | Fighter)
Feedback Print Bookmark and Share
 
ತನ್ನ ವಾಯುಬಲ ಸಮರ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಕ್ರಮವಾಗಿ ಪಾಕಿಸ್ತಾನವು ಚೀನಾದಿಂದ 36 ಜೆ-10 ಸಮರವಿಮಾನಗಳನ್ನು 1.4 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದದಲ್ಲಿ ಖರೀದಿಸಲಿದ್ದು, ಇದೇ ಮಾದರಿಯ ಇನ್ನಷ್ಟು ವಿಮಾನಗಳ ಖರೀದಿಗೆ ಆಯ್ಕೆಯನ್ನು ಮುಕ್ತವಾಗಿರಿಸಿದೆ.

ಚೀನಾ ಎರಡು ತುಕಡಿಗಳಿಗೆ ಸಾಕಾಗುವಷ್ಟು 36 ಜೆ-10 ವಿಮಾನಗಳನ್ನು ಸರಬರಾಜು ಮಾಡಲಿದೆಯೆಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆ-10 ಅಥವಾ ಜಿಯಾನ್ 10 ಚೀನಾದ ಅತ್ಯಂತ ಸುಧಾರಿತ ಯುದ್ಧವಿಮಾನವಾಗಿದ್ದು, ಅಮೆರಿಕ ಎಫ್-16 ಸಮರ ಫಾಲ್ಕನ್ಸ್‌ಗಳಿಗೆ ಹೋಲಿಕೆ ಮಾಡಬಹುದಾದ ಮ‌ೂರನೇ ಪೀಳಿಗೆಯ ವಿಮಾನವಾಗಿದೆ.

ಇಸ್ಲಾಮಾಬಾದ್ ಮತ್ತು ಬೀಜಿಂಗ್ ಸುಧಾರಿತ ಫೈಟರ್ ಜೆಎಫ್-17 ಅಥವಾ ಥಂಡರ್ ನಿರ್ಮಾಣಕ್ಕೆ ಸಹಯೋಗ ಹೊಂದಿದ್ದು, ಈ ತಿಂಗಳ ಅಂತ್ಯದಲ್ಲಿ ತಯಾರಾಗುವ ನಿರೀಕ್ಷೆಯಿದೆಯೆಂದು ವಾಯುಪಡೆ ಮುಖ್ಯಸ್ಥ ಮಾರ್ಶಲ್ ರಾವ್ ಖಾಮರ್ ಸುಲೇಮಾನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ