ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಕ್ಸನ್ ವರ್ಣಚಿತ್ರ 8,12,000 $ಗೆ ಮಾರಾಟ (Jackson | King of Pop | Portrait | Los Angeles)
Feedback Print Bookmark and Share
 
ಲಂಡನ್:ದಂತಕತೆ ಕಲಾವಿದ ಆಂಡಿ ವಾರಲ್ ಚಿತ್ರಿಸಿದ ಕಿಂಗ್ ಆಫ್ ಪಾಪ್ ಮೈಕೇಲ್ ಜಾಕ್ಸನ್ ಅವರ ವರ್ಣಚಿತ್ರವನ್ನು ಲಾಸ್‌ಏಂಜಲ್ಸ್‌ನಲ್ಲಿ ನಡೆದ ಹರಾಜಿನಲ್ಲಿ 812,000 ಡಾಲರ್‌ಗೆ ಮಾರಾಟ ಮಾಡಲಾಗಿದೆ.

ಪಾಪ್ ಕಣ್ಮಣಿಯ ಚಿತ್ರ ಅಜ್ಞಾತ ಬಿಡ್‌ದಾರ ಕ್ರಿಸ್ಟೀಸ್ ಹರಾಜು ಮನೆಯಲ್ಲಿ ಮಂಗಳವಾರ ನಿರೀಕ್ಷಿತ ದರವಾದ ಏಳು ಲಕ್ಷ ಡಾಲರ್‌ಗಿಂತ ಹೆಚ್ಚು ಬೆಲೆಗೆ ಮಾರಾಟವಾಯಿತು. ನ್ಯೂಯಾರ್ಕ್ ಮ‌ೂಲದ ಸಂಗ್ರಾಹಕ 1984ರಲ್ಲಿ ಮುಕ್ತಾಯವಾದ ಈ ಚಿತ್ರಕಲೆಯನ್ನು ಮಾರಾಟ ಮಾಡಿದ್ದು, 1990ರಲ್ಲಿ ಆಂಡಿ ವಾರಾಲ್ ಪ್ರತಿಷ್ಠಾನದಿಂದ ಅವರು ಖರೀದಿಸಿದ್ದರು.

ಜಾಕ್ಸನ್ ಜ್ಯಾಕೆಟ್ ಧರಿಸಿ,ನಸುನಗುತ್ತಾ ನಿಂತಿರುವುದನ್ನು ಈ ವರ್ಣಚಿತ್ರ ಬಿಂಬಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ