ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ವದೇಶಿ ನೆಲದಲ್ಲಿ ಭಯೋತ್ಪಾದನೆ: ಬ್ರಿಟನ್ನರ ಭೀತಿ (London | Briton | Terrorist | Military)
Feedback Print Bookmark and Share
 
ಆಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಯಿಂದ ವಾಸ್ತವವಾಗಿ ಸ್ವದೇಶಿ ನೆಲದಲ್ಲಿ ಭಯೋತ್ಪಾದನೆಯ ಭೀತಿ ಹೆಚ್ಚಿಸಿದೆಯೆಂದು ಸುಮಾರು ಅರ್ಧದಷ್ಟು ಬ್ರಿಟನ್ನರು ಯೋಚಿಸಿದ್ದಾರೆಂದು ಸಮೀಕ್ಷೆಯೊಂದು ತಿಳಿಸಿದೆ.

ಆದರೆ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಸರ್ಕಾರದ ವಾದವೇ ಬೇರೆಯಾಗಿದ್ದು, ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರನ್ನು ಸೋಲಿಸುವುದರಿಂದ ಬ್ರಿಟನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಉಗ್ರಗಾಮಿಗಳ ದಾಳಿಯ ಅಪಾಯ ತಗ್ಗುತ್ತದೆಂದು ಹೇಳಿದ್ದಾರೆ.

ಸಮೀಕ್ಷೆ ಮಾಡಿದ ಶೇ.21ರಷ್ಟು ಜನರು ಗೋರ್ಡನ್ ಅಭಿಪ್ರಾಯಕ್ಕೆ ಬೆಂಬಲಿಸಿದರೂ,ಶೇ.46ರಷ್ಟು ಜನರು ಆಫ್ಘಾನಿಸ್ತಾನ ಸಂಘರ್ಷದಿಂದ ಮುಸ್ಲಿಂ ಜನಸಂಖ್ಯೆಯಲ್ಲಿ ಕೋಪ ಮತ್ತು ಅಸಹನೆ ಸೃಷ್ಟಿಸುವ ಮ‌ೂಲಕ ಬೆದರಿಕೆಯನ್ನು ತೀವ್ರಗೊಳಿಸುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಶೇ.14 ಜನರು ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಯಿಂದ ಬೆದರಿಕೆಯಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲವೆಂದು ಹೇಳಿದರೆ. ಶೇ.19 ಜನರು ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲವೆಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ