ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಂಚನೆ ಆರೋಪ: ಭಾರತೀಯ ಮ‌ೂಲದ ಮಹಿಳೆಗೆ ಜೈಲು (London | Woman | Customer | Indian)
Feedback Print Bookmark and Share
 
ಲಂಡನ್‌ನಲ್ಲಿ ಮನೆ ಅಡಮಾನದ ಸಲಹೆಗಾರಳಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಮ‌ೂಲದ ಮಹಿಳೆಯೊಬ್ಬಳು ಗ್ರಾಹಕರಿಗೆ ವಂಚನೆ ಎಸಗುತ್ತಿದ್ದ ಆರೋಪದ ಮೇಲೆ 18 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

40ರ ಪ್ರಾಯದ ಶ್ರುತಿ ಪಟೇಲ್ ತನ್ನ ಗ್ರಾಹಕರಿಗೆ ವಂಚಿಸಿದ ಆರೋಪ ಮತ್ತುಗ್ರಾಹಕರಿಂದ ಸ್ವೀಕರಿಸಿದ 170,000 ಪೌಂಡ್ ಹಣವನ್ನು ತಮ್ಮ ಮಕ್ಕಳ ಖಾಸಗಿ ಶಿಕ್ಷಣದ ಹಣ ಪಾವತಿಗೆ ಮತ್ತು ಐಷಾರಾಮಿ ಕಾರು ಖರೀದಿಗೆ ಬಳಸಿದ್ದಾಳೆಂದು ಆರೋಪಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಳು. ಪಟೇಲ್ ತನ್ನ ಇಬ್ಬರು ಗ್ರಾಹಕರ ಹೆಸರುಗಳಲ್ಲಿ ಸಾಲಗಳನ್ನು ಪಡೆದುಕೊಂಡಿದ್ದಳು. ಅವರಲ್ಲಿ ಒಬ್ಬರು ಅವಳ ನಿಕಟ ಸ್ನೇಹಿತರಾಗಿದ್ದು, ಅಡಮಾನ ಪಡೆಯಲು ತನ್ನ ಸ್ನೇಹಿತರ ಹೆಸರನ್ನು ಅಕ್ರಮವಾಗಿ ಬಳಸಿದ್ದಳು ಮತ್ತು ತನ್ನ ಗ್ರಾಹಕರ ಹೆಸರುಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಳು.

ಆಕೆಯ ಬಗ್ಗೆ ಅನುಮಾನ ಪಡದ ದಂಪತಿ ತಮ್ಮ ಮನೆ ಖರೀದಿಗೆ 74,000 ಪೌಂಡ್ ಅಡಮಾನ ಸಾಲ ಮಾಡಿದ್ದರು. ಆದರೆ ಮಹಿಳೆ ಗೋಪ್ಯವಾಗಿ ದಂಪತಿ ಹೆಸರಿನಲ್ಲಿ 28,198 ಹೆಚ್ಚುವರಿ ಸಾಲವನ್ನು ಪಡೆದಿದ್ದಳು ಎಂದು ಪ್ರಾಸಿಕ್ಯೂಟಿಂಗ್ ವಕೀಲ ಜೊನಾಥನ್ ಎಲೆ ಲೈಸೆಸ್ಟರ್ ಕ್ರೌನ್ ಕೋರ್ಟ್‌ಗೆ ತಿಳಿಸಿದ್ದಾರೆ.

ಇಂಗ್ಲೀಷ್ ಓದಲು ಬಾರದ ದಂಪತಿ ಸಾಲದ ದಾಖಲೆಗಳಿಗೆ ಸಹಿ ಹಾಕಿದ ಬಳಿಕ ದುಬಾರಿ ಮರುಪಾವತಿ ಕುರಿತು ಪ್ರಶ್ನಿಸಿದಾಗ ಪಟೇಲ್ ಏನೋ ನೆಪಗಳನ್ನು ಹೇಳುತ್ತಿದ್ದಳೆಂದು ತಿಳಿದುಬಂದಿತ್ತು. ಫೆ.2008ರಲ್ಲಿ ಮನಿ ಅಡ್ವೈಸ್ ಕೇಂದ್ರ ನೌಕರ ಈ ವಂಚನೆಯ ಬಗ್ಗೆ ದಂಪತಿಗೆ ಮಾಹಿತಿ ನೀಡಿದ ಬಳಿಕ ವಂಚಕ ಮಹಿಳೆ ಅದನ್ನು ಒಪ್ಪಿಕೊಂಡು ಪೊಲೀಸರಿಗೆ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್, ಅಡಮಾನ, ಜೊನಾಥನ್, ದಂಪತಿ