ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿಯ ಭಾರತದ ನಂಟು ತನಿಖೆಗೆ ಎಫ್‌ಬಿಐ ತಂಡ (Mueller | Headley | New Delhi | FBI)
Feedback Print Bookmark and Share
 
ಭಯೋತ್ಪಾದನೆ ದಾಳಿಗಳಿಗೆ ಸಂಚು ರೂಪಿಸಿದ ಡೇವಿಡ್ ಹೆಡ್ಲಿಯ ಭಾರತದ ನಂಟು ಕುರಿತು ತನಿಖೆ ನಡೆಸಲು ಎಫ್‌ಬಿಐ ಮುಖ್ಯಸ್ಥ ರಾಬರ್ಟ್ ಮುಲ್ಲರ್ ನವದೆಹಲಿಗೆ ತನಿಖೆದಾರರ ತಂಡದ ನೇತೃತ್ವ ವಹಿಸಲಿದ್ದಾರೆ.

ಈ ತಂಡವು ನ.18ರಂದು ಎರಡು ದಿನಗಳ ಭೇಟಿ ಸಲುವಾಗಿ ಭಾರತಕ್ಕೆ ಆಗಮಿಸಲಿದ್ದು, ಹೆಡ್ಲಿಯ ಭಾರತೀಯ ಜಾಲ ಮತ್ತು ಲಷ್ಕರೆ ತೊಯ್ಬಾ ಜತೆ ಅವನ ನಂಟನ್ನು ಕುರಿತು ಸ್ಥಿರಪಡಿಸಲಿದ್ದಾರೆಂದು ವರದಿಗಳು ಹೇಳಿವೆ.

ಭಾರತ ಮತ್ತು ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನೆ ದಾಳಿ ನಡೆಸುವ ವಿಫಲ ಸಂಚಿನ ಆರೋಪದ ಮೇಲೆ ಹೆಡ್ಲಿ ಮತ್ತು ಪಾಕಿಸ್ತಾನಿ ಸಹಪಿತೂರಿಗಾರ ಹುಸೇನ್ ರಾನಾನನ್ನು ಬಂಧಿಸಲಾಗಿದೆ. ಇವರಿಬ್ಬರೂ ನಿಷೇಧಿತ ಪಾಕ್ ಮ‌ೂಲದ ಲಷ್ಕರೆ ತೊಯ್ಬಾ ಕಾರ್ಯಕರ್ತರೆಂದು ಎಫ್‌ಬಿಐ ನಂಬಿದೆ. ಚಿಕಾಗೊ ಕೋರ್ಟ್ ಎಫ್‌ಬಿಐ ಈ ಪ್ರಕರಣ ಕುರಿತು ತನಿಖೆ ಮುಗಿಸಿ ದೋಷಾರೋಪ ಹೊರಿಸಲು 60 ದಿನಗಳ ಗಡುವು ನೀಡಿದೆ.

ಇದರ ಬೆನ್ನಹಿಂದೆಯೇ ಭಾರತದ ಸರ್ಕಾರ ಐದು ಭಾರತದ ನಗರಗಳಾದ ದೆಹಲಿ, ಮುಂಬೈ, ಲಕ್ನೊ, ಆಗ್ರಾ ಮತ್ತು ಅಹ್ಮದಾಬಾದ್ 26/11 ವಾರ್ಷಿಕಕ್ಕೆ ಮುನ್ನವೇ ಭಯೋತ್ಪಾದನೆ ರೆಡಾರ್ ಅಡಿಯಲ್ಲಿದೆಯೆಂದು ಎಚ್ಚರಿಕೆ ನೀಡಿದೆ. ಹೆಡ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಈ ನಗರಗಳಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಎಫ್‌ಬಿಐ ತೀರ್ಮಾನದ ಆಧಾರದ ಮೇಲೆ ಭಾರತದ ಎಚ್ಚರಿಕೆ ಹೊರಬಿದ್ದಿದೆ.

ಹೆಡ್ಲೆ ಪಾಕಿಸ್ತಾನಕ್ಕೆ ಸಹ ಅನೇಕ ಬಾರಿ ಭೇಟಿ ನೀಡಿದ್ದು, ಭಯೋತ್ಪಾದಕ ಸಂಘಟನೆಗಳಿಂದ ತರಬೇತಿ ಪಡೆಯಲು ಗಣನೀಯ ಸಮಯ ವಿನಿಯೋಗಿಸಿದ್ದಾನೆಂದು ಅಮೆರಿಕ ತನಿಖೆದಾರರು ಖಚಿತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಯೋತ್ಪಾದನೆ, ಹೆಡ್ಲೆ, ಮುಲ್ಲರ್