ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ವೃತ್ತಿಪರರ ಪ್ರವೇಶಕ್ಕೆ ಬ್ರಿಟನ್ ಕಟ್ಟುಪಾಡು (London | Brown |, Europ | Immigration)
Feedback Print Bookmark and Share
 
ಯುರೋಪ್ ಹೊರಗಿನಿಂದ ಬ್ರಿಟನ್‌ಗೆ ವೈದ್ಯರು ಮತ್ತು ವೃತ್ತಿಪರರ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದಾಗಿ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಶಪಥ ತೊಟ್ಟಿದ್ದು, ಸಾವಿರಾರು ಭಾರತೀಯರ ಪ್ರವೇಶಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಲೇಬರ್ ಸರ್ಕಾರದ ವಲಸೆ ನೀತಿಯಲ್ಲಿ ಮಹತ್ವದ ಬದಲಾವಣೆ ಇಂಗಿತ ನೀಡಿರುವ ಬ್ರೌನ್, ವಲಸೆಗಾರರ ಅಲೆಗೆ ಕಡಿವಾಣ ಹಾಕುವುದಾಗಿ ಶಪಥ ಮಾಡಿದ್ದು, ಬ್ರಿಟನ್‌ನಲ್ಲಿ ಕೆಲಸ ಮಾಡುವ ವಲಸೆಗಾರರನ್ನು ನಿರ್ಧರಿಸಲು ಅಂಶಗಳ ಆಧಾರಿತ ವ್ಯವಸ್ಥೆಯನ್ನು ಕಟ್ಟುಪಾಡಿಗೊಳಪಡಿಸಲು ತಮ್ಮ ಸರ್ಕಾರ ಯೋಜಿಸಿದೆಯೆಂದು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ವಲಸೆಯು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬಲದ ಮ‌ೂಲವಾಗಿದ್ದರೂ, ಯುರೋಪೇತರ ಪೌರರು ಬ್ರಿಟನ್‌ಗೆ ಪ್ರವೇಶ ನಿಯಂತ್ರಿಸಲು ಕಳೆದ ವರ್ಷ ಆರಂಭಿಸಿದ ಅಂಶಗಳ ಆಧಾರಿತ ವ್ಯವಸ್ಥೆಯನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಬ್ರೌನ್ ಹೇಳಿದರು.

ಹೊಸ ನೀತಿ ಮಾರ್ಪಾಟಿನಿಂದಾಗಿ ಯುರೋಪೇತರ ಆಸ್ಪತ್ರೆ ಕನ್ಸಲ್ಟೆಂಟ್ಸ್, ಸಿವಿಲ್ ಎಂಜಿನಿಯರ್‌ಗಳು, ಏರ್‌ಕ್ರಾಫ್ಟ್ ಎಂಜಿನಿಯರ್‌ಗಳು ಮತ್ತು ನೌಕಾಧಿಕಾರಿಗಳಿಗೆ ಬ್ರಿಟನ್ ಬಾಗಿಲುಮುಚ್ಚುವುದನ್ನು ಬ್ರೌನ್ ಪ್ರಕಟಿಸುತ್ತಾರೆಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ