ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾವೋವಾದಿಗಳಿಂದ ಸರ್ಕಾರಿ ವಿರೋಧಿ ಪ್ರತಿಭಟನೆ (Maoist | Nepal | Kathmandu | Puppet)
Feedback Print Bookmark and Share
 
ಸಾವಿರಾರು ಮಾವೋವಾದಿ ಕಾರ್ಯಕರ್ತರು ನೇಪಾಳದ ಬೀದಿಗಳಿಗೆ ಇಳಿದು ಗುರುವಾರ ದೊಡ್ಡ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ನಡೆಸಿದರು. ಕೈಗೊಂಬೆ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಿಸುತ್ತಾ, ಕೆಂಪು ಧ್ವಜಗಳನ್ನು ಹಿಡಿದು ಕಠ್ಮಂಡು ಹೃದಯಭಾಗದ ಮುಖ್ಯ ಸರ್ಕಾರಿ ಸಂಕೀರ್ಣವನ್ನು ಸುತ್ತುವರಿದರು.

ಮಾವೋವಾದಿಗಳು ನೇಪಾಳದ ಮಹತ್ವದ ಚುನಾವಣೆಯಲ್ಲಿ ಜಯಗಳಿಸಿ ರಾಜವಂಶದ ಆಡಳಿತ ರದ್ದುಮಾಡಿದ್ದರು. ಆದರೆ ಸೇನೆಯ ಮುಖ್ಯಸ್ಥರನ್ನು ಪದಚ್ಯುತಿಗೊಳಿಸುವ ಮಾವೋವಾದಿಗಳ ಪ್ರಯತ್ನವನ್ನು ಅಧ್ಯಕ್ಷರು ತಳ್ಳಿಹಾಕಿದ್ದರಿಂದ ಮಾವೋವಾದಿಗಳ ಸರ್ಕಾರ ಪತನಗೊಂಡಿತ್ತು.

ಅಧ್ಯಕ್ಷರ ಪ್ರಯತ್ನ ಅಸಂವಿಧಾನಿಕ ಎಂದು ಆರೋಪಿಸಿದ ಮಾವೋವಾದಿಗಳು ಸೇನೆ ಮುಖ್ಯಸ್ಥರ ಪದಚ್ಯುತಿ ನಿರ್ಬಂಧಿಸಿದ್ದಕ್ಕಾಗಿ ಅಧ್ಯಕ್ಷರು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ