ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಬ್‌ಮೆರೀನ್ ಖರೀದಿಯಲ್ಲಿ ಜರ್ದಾರಿ ಅಕ್ರಮ? (Jardari | Submarine | Pakistan | Bribe)
Feedback Print Bookmark and Share
 
1994ರಲ್ಲಿ ಪಾಕಿಸ್ತಾನದ ನೌಕಾದಳಕ್ಕೆ ಮ‌ೂರು ಫ್ರೆಂಚ್ ಜಲಾಂತರ್ಗಾಮಿಗಳ ಖರೀದಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮಿಲಿಯಾಂತರ ಡಾಲರ್ ರುಷುವತ್ತು ಸ್ವೀಕರಿಸಿದ್ದಾರೆಂದು ಫ್ರೆಂಚ್ ದಿನಪತ್ರಿಕೆಯೊಂದರಲ್ಲಿ ಆರೋಪಿಸಲಾಗಿದೆ.

ದಿನಪತ್ರಿಕೆ ಲಿಬರೇಷನ್ ತನ್ನ ಬಳಿಯಿರುವ ದಾಖಲೆಗಳನ್ನು ಉದಾಹರಿಸಿ, ಮ‌ೂರು ಅಗೋಸ್ಟಾ-90 ಸಬ್‌ಮೆರೀನ್‌ಗಳನ್ನು 25 ದಶಲಕ್ಷ ಯ‌ೂರೋಗೆ ಖರೀದಿಸಿಲು 4.3 ದಶಲಕ್ಷ ಡಾಲರ್ ಲಂಚವನ್ನು ಜರ್ದಾರಿ ಸ್ವೀಕರಿಸಿದ್ದಾರೆಂದು ಆರೋಪಿಸಿದೆ.ಒಪ್ಪಿತ ರುಷುವತ್ತು ಪೂರ್ಣಪ್ರಮಾಣದಲ್ಲಿ ಪಾವತಿಯಾಗದಿದ್ದರಿಂದ ಕರಾಚಿ ಮೇಲೆ 2002ರ ಭಯೋತ್ಪಾದನೆ ದಾಳಿಯಲ್ಲಿ 11 ಫ್ರೆಂಚ್ ಪೌರರು ಸಾವಪ್ಪಿದ್ದಾರೆಂದು ತನಿಖೆದಾರರು ಭಾವಿಸಿದ್ದಾಗಿ ದಿನಪತ್ರಿಕೆ ಪ್ರತಿಪಾದಿಸಿದೆ.

ದಿನಪತ್ರಿಕೆಯ ವರದಿ ಬಗ್ಗೆ ಇಸ್ಲಾಮಾಬಾದ್‌ನಲ್ಲಿ ಸರ್ಕಾರದ ವಕ್ತಾರರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸೇನಾಪಡೆಯು ರಕ್ಷಣಾ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸೂಕ್ತ ಸ್ಪರ್ಧಾತ್ಮಕ ಪ್ರಕ್ರಿಯೆ ಮ‌ೂಲಕ ಸಬ್‌ಮೆರೀನ್ ಖರೀದಿ ಮಾಡಿದೆಯೆಂದು ವಕ್ತಾರರು ವಾದಿಸಿದ್ದಾರೆ.

ಸಬ್‌ಮೆರಿನ್ ಖರೀದಿ ಮಾಡಿದ ಸಂದರ್ಭದಲ್ಲಿ ಜರ್ದಾರಿ ಅಧ್ಯಕ್ಷರಾಗಲೀ, ಪ್ರಧಾನಮಂತ್ರಿಯಾಗಲೀ ಅಥವಾ ರಕ್ಷಣಾ ಸಚಿವರಾಗಿ ಇರಲಿಲಲ್ಲವೆಂದು ವಕ್ತಾರರು ಸಮರ್ಥಿಸಿಕೊಂಡಿದ್ದಾರೆ. ಈ ಖರೀದಿಗೆ ಹೊಣೆಯಾದ ಆಗಿನ ಅಡ್ಮೈರಲ್‌ರನ್ನು ಉತ್ತರದಾಯಿ ದಳ ತನಿಖೆ ನಡೆಸಿದ್ದು, ಜರ್ದಾರಿ ವಿರುದ್ಧ ಯಾವುದೇ ಅಕ್ರಮ ಸ್ಥಿರಪಟ್ಟಿಲ್ಲವೆಂದು ವಕ್ತಾರ ತಿಳಿಸಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ