ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬರಿಗೈಲಿ ವಾಪಸು ಬಂದ ಗುಪ್ತಚರ ಅಧಿಕಾರಿಗಳು (Let | Headly | America | India)
Feedback Print Bookmark and Share
 
ಎಲ್‌ಇಟಿ ಜತೆ ಸಂಪರ್ಕ ಹೊಂದಿದ್ದ ಹೆಡ್ಲಿಯ ವಿಚಾರಣೆಗೆ ಅಮೆರಿಕಕ್ಕೆ ತೆರಳಿದ್ದ ಭಾರತದ ಬೇಹುಗಾರಿಕೆ ದಳದ ಅಧಿಕಾರಿಗಳು ಒಂದು ವಾರಗಳು ಕಾದ ಬಳಿಕ ನಿರಾಶೆಯಿಂದ ಬರಿಗೈಲಿ ವಾಪಸಾಗಿದ್ದಾರೆ.

ಚಿಕಾಗೊ ಜೈಲಿನಲ್ಲಿರುವ ಹೆಡ್ಲೆಯನ್ನು ವಿಚಾರಣೆ ಮಾಡಲು ನ.1ರಿಂದಲೇ ಅಧಿಕಾರಿಗಳು ಇಲ್ಲಿಗೆ ಬಂದಿದ್ದರು. ಆದರೆ ಭಾರತದ ಬೇಹುಗಾರಿಕೆ ಅಧಿಕಾರಿಗಳು ಎಫ್‌ಬಿಐ ಅಧಿಕಾರಿಗಳ ಜತೆ ವಿಚಾರವಿನಿಮಯ ಮಾಡಿಕೊಂಡರೂ, ಹೆಡ್ಲೆಯನ್ನು ವಿಚಾರಣೆ ಮಾಡುವ ಪ್ರಮುಖ ಉದ್ದೇಶ ಈಡೇರದೇ ಬರಿಕೈಯಲ್ಲಿ ವಾಪಸಾದರು.

ತನಿಖಾ ಪ್ರಕ್ರಿಯೆಯ ತೊಡಕುಗಳೇ ಇದಕ್ಕೆ ಕಾರಣವೆಂದು ಗುಪ್ತಚರ, ತನಿಖಾ ಮತ್ತು ವಿಶ್ಲೇಷಣಾ ಘಟಕದ ಮ‌ೂಲಗಳು ಈ ಕುರಿತು ಪ್ರತಿಕ್ರಿಯಿಸಿವೆ. ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜು, ಡೆಹ್ರಾಡೂನ್ ಕಾಲೇಜು ಮತ್ತು ಮುಸ್ಸೌರಿ ಶಾಲೆಯ ವಿರುದ್ಧ ದಾಳಿ ನಡೆಸುವ ಸಂಚನ್ನು ಉಗ್ರಗಾಮಿಗಳು ರೂಪಿಸಿದ್ದು, ಈ ಕುರಿತು ತನಿಖೆಗೆ ಆಗಮಿಸಿದ್ದು,ಬಂದ ದಾರಿಗೆ ಫಲವಿಲ್ಲವೆಂದು ಹಿಂತಿರುಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಲ್ಇಟಿ, ಹೆಡ್ಲಿ, ಬೇಹುಗಾರಿಕೆ